ಆರೋಗ್ಯಕರ ಬದುಕಿಗೆ ಯೋಗ ಅತ್ಯಗತ್ಯ – ಜಗದೀಶ್‌ ಶೆಟ್ಟರ್‌

10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌‍, ಮಹಾನಗರ ಪಾಲಿಕೆ, ಜಿಲ್ಲಾ ಆಯುಷ್‌ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಕೆಪಿಟಿಸಿಎಲ್‌ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್‌ ಶೆಟ್ಟರ್‌ ಯೋಗ ಪ್ರದರ್ಶನ ಮಾಡಿದರು.

ಇನ್ನು ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಹನುಮಂತ ನಿರಾಣಿ, ಜಿಲ್ಲಾ ಆಯುಷ್‌ ಅಧಿಕಾರಿ ಶ್ರೀಕಾಂತ ಸುಣಧೋಳಿ, ಜರ್ಮನಿ ಹಾಗೂ ಇಂಗ್ಲೆಂಡ್‌ ದೇಶದ ಯೋಗ ಪಟುಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆ, ಪೊಲೀಸ್‌‍ ಇಲಾಖೆ ಸಿಬ್ಬಂದಿಗಳು, ಎನ್‌‍ಜಿಓ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ:– ಹೆಚ್‌ಡಿಕೆ ವಿರುದ್ಧ ನಟ ದರ್ಶನ್ ಮಹಿಳಾ ಅಭಿಮಾನಿ ನಿಂದನೆ – ದೂರು ದಾಖಲು

ಇದೇ ವೇಳೆ ಆರೋಗ್ಯಕರ ಬದುಕಿಗೆ ಯೋಗ ಅತ್ಯಗತ್ಯ. ಪ್ರತಿದಿನವು ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು. ಯೋಗದಿಂದ ಬೌದ್ಧಿಕ ಬೆಳವಣಿಗೆ ಜತೆಗೆ ಸಾಮಾಜಿಕ ಬದುಕಿನಲ್ಲಿ ಉತ್ತಮ ಜೀವನ ನಡೆಸಲು ಸಹಕಾರಿಯಾಗಲಿದೆ.

ಇಂದಿನ ಯುವ ಪೀಳಿಗೆ ತಮ ದಿನಚರಿಯಲ್ಲಿ ಯೋಗ ಪದ್ಧತಿ ಅಳವಡಿಸಿಕೊಳ್ಳಬೇಕು. ಮನುಷ್ಯ ಆಧುನಿಕ ಒತ್ತಡದಿಂದ ಕಲಬೆರಿಕೆ ಆಹಾರದಿಂದ ಶ್ರಮರಹಿತ ಜೀವನದಿಂದ ವೈಜ್ಞಾನಿಕ ಸಾಧನಗಳ ದುರ್ಬಳಕೆ ಹಾಗೂ ದುಶ್ಚಟಗಳಿಂದ ಅನೇಕ ರೋಗಗಳಿಗೆ ಬಲಿಯಾಗಿದ್ದಾನೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದರೆ ಪ್ರಕೃತಿಯನ್ನು ಅರ್ಥ ಮಾಡಿಕೊಂಡು ಸಹಜ, ಸರಳ, ಬದುಕಿನ ಜೊತೆಗೆ ತನ್ನಂತೆ ಇತರೆ ಜೀವಿಗಳಿಗೆ ಬದುಕುವ ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:– ಕಾಂಗ್ರೆಸ್‌‍ ನಿಂದ ಆರ್ಥಿಕ ಪರಿಸ್ಥಿತಿ ದಿವಾಳಿ ಹಂತಕ್ಕೆ ತಲುಪಿದೆ – ಬಿ.ವೈ.ವಿಜಯೇಂದ್ರ 

Leave a Reply

Your email address will not be published. Required fields are marked *