ಬೆಂಗಳೂರಿನಲ್ಲಿ ಮತ್ತೆ ಡೆಂಗ್ಯೂ ಜ್ವರದ ಜೊತೆಗೆ ವೈರಲ್ ಫೀವರ್ ಕಾಟ ಶುರುವಾಗಿದೆ. ರಾಜ್ಯದಲ್ಲಿ ಇದುವರೆಗೆ 3839 ಪ್ರಕರಣಗಳು ವರದಿಯಾಗಿದೆ. ಬೆಂಗಳೂರು ಒಂದರಲ್ಲೇ 1530 ವೈರಲ್ ಫೀವರ್ ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಸೋಂಕು ಪತ್ತೆಯಾದ ಸ್ಥಳಗಳಲ್ಲಿ ಲಾರ್ವ ಉತ್ಪಾದನೆ ತಡೆಯಲು ಫಾಗಿಂಗ್ ಕೆಲಸ ತೀವ್ರಗೊಳಿಸಲಾಗಿದ್ದು ಆರೋಗ್ಯ ಇಲಾಖೆ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದೆ. ರೋಗನಿರೋಧಕ ಶಕ್ತಿ ಉದ್ಭವಿಸುವ ಆಹಾರ ವಿತರಿಸುವಂತೆ ಇಲಾಖೆ ಸಲಹೆ ನೀಡಿದೆ. ಆರೋಗ್ಯ ವಿಷಯದಲ್ಲಿ ಮುಂಜಾಗ್ರತೆ ವಹಿಸುವಂತೆ ಬಿಬಿಎಂಪಿ ಜನರಲ್ಲಿ ಮನವಿ ಮಾಡಿದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ವೈರಲ್ ಫೀವರ್ ಹೆಚ್ಚಾಗಲು ಕಾರಣವಾಗಿದೆ. ಇದ್ದಕ್ಕಿದ್ದಂತೆ ಶೀತಗಾಳಿ ಆಗಾಗ್ಗೆ ಸುರಿಯುವ ಮಳೆ, ಧಿಡೀರ್ ಬಿಸಿಲು ಮುಂತಾದ ವ್ಯತಿರಿಕ್ತ ಪ್ರಾಕೃತಿಕ ಏರಿಳಿತಗಳು ವೈರಾಣುಗಳು ಹೆಚ್ಚಾಗಲು ಕಾರಣ ಎಂದು ವೈದ್ಯರ ಅಭಿಪ್ರಾಯವಾಗಿದೆ.
ಇದನ್ನೂ ಓದಿ:– ಆರೋಗ್ಯಕರ ಬದುಕಿಗೆ ಯೋಗ ಅತ್ಯಗತ್ಯ – ಜಗದೀಶ್ ಶೆಟ್ಟರ್