ಪವಿತ್ರಾಗೌಡ ದರ್ಶನ್‌ ಪಾಲಿಗೆ ಶನಿ ಆಗಿದ್ದಾಳೆ – ಅಡ್ಡಂಡ ಕಾರ್ಯಪ್ಪ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಇದಾಗಲೇ ನಟ ದರ್ಶನ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್‌ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ6, ಎ7 ಆರೋಪಿಗಳನ್ನು ಚಿತ್ರದುರ್ಗ ಡಿವೈ ಎಸ್ಪಿ ಕಾಮಾಕ್ಷಿಪಾಳ್ಯ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ನಾನು ದರ್ಶನ್ ಒಂದೇ ಊರಿನವರು , ನಮ್ಮ ಇಬ್ಬರದೂ ಪೊನ್ನಂಪೇಟೆ. ದರ್ಶನ್‌ ಗೆ ಮೊದಲು ಬಣ್ಣ ಹಚ್ಚಿದ್ದು ನಾನು ಎಂದು ದರ್ಶನ್‌ ಮೊದಲ ಗುರು ಅಡ್ಡಂಡ ಸಿ ಕಾರ್ಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ದರ್ಶನ್ ಮತ್ತು ದಿನಕರ್ ಇಬ್ಬರೂ ರಜಾದ ಸಮಯದಲ್ಲಿ ಊರಿಗೆ ಬರ್ತಿದ್ರು. ಆಗ ನನ್ನ ನಾಟಕದಲ್ಲಿ ನಾನು ಅವನಿಗೆ ರಾಜನ ಪಾತ್ರ ಕೊಟ್ಟಿದ್ದೆ. ಹೀರೋ ಆಗು ಎಂದು ಆಶೀರ್ವಾದ ಮಾಡಿದ್ದೆ. ಮುಂದೆ ಧಾರಾವಾಹಿಗಳಲ್ಲಿ ಅವಕಾಶ ಸಿಕ್ತು. ಧಾರಾವಾಹಿಗಳಲ್ಲಿ ಕೆಟ್ಟದಾಗಿ ಪಾತ್ರ ಮಾಡುತ್ತಿದ್ದ, ಆಗ ಅವನಿಗೆ ಬೈದು ನೀನಾಸಂಗೆ ಹೋಗಿ ನಟನೆ ಕಲಿ ಎಂದಿದ್ದೆ. ನಾನು ಮಂಡ್ಯ ರಮೇಶ್ ಇಬ್ಬರು ಲೆಟರ್ ಕೊಟ್ಟು ನೀನಾಸಂಗೆ ಕಳುಹಿಸಿದ್ವಿ ಎಂದು ಹೇಳಿದರು.

ಹೆಣ್ಣು ಮತ್ತು ಹೆಂಡದ ನಶೆ ದರ್ಶನ್‌ಗೆ ಈ ಸ್ಥಿತಿ ತಂದಿಟ್ಟಿದೆ. ದರ್ಶನ್‌ಗೆ ಸಂಸ್ಕಾರ ಇಲ್ಲದ ಕಾರಣ ಆತನಿಗೆ ಈ ಪರಿಸ್ಥಿತಿ ಬಂದಿದೆ. ಪವಿತ್ರಾಗೌಡ ಆತನ ಪಾಲಿಗೆ ಶನಿ ಆಗಿದ್ದಾಳೆ. ಯಶಸ್ಸು ಎಂಬುದು ದರ್ಶನ್ ಒಳಗೆ ಅಹಂ ಬೆಳೆಸಿತು. ಸಿನಿಮಾದಲ್ಲಿ ಮಾಡುವ ಪಾತ್ರವನ್ನು ನಿಜ ಜೀವನದಲ್ಲಿ ಮಾಡೋಕೆ ಹೋಗಿ ಈಗ ಜೈಲು ಸೇರಿದ್ದಾನೆ ಎಂದು ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *