50 ನೇ G7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಡರಾತ್ರಿ ಇಟಲಿಯ ಅಪುಲಿಯಾಗೆ ತಲುಪಿದ್ದಾರೆ. ಮೋದಿಯವರು 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದು ಮೊದಲ ವಿದೇಶ ಪ್ರವಾಸವಾಗಿದೆ.

G7 ಶೃಂಗಸಭೆಸಭೆ ಮುಗಿದ ನಂತರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿ ವಿಡಿಯೋ ಮಾಡಿ #Melodi ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಾಯಕರ ಜೊತೆಗಿನ ಫೋಟೋಗಳನ್ನಷ್ಟೇ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಎರಡೂ ದೇಶಗಳ ಪ್ರಧಾನಿಗಳು ನಗುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ, ಮೆಲೋನಿ, ‘ಮೆಲೋಡಿ ತಂಡದಿಂದ ಎಲ್ಲರಿಗೂ ನಮಸ್ಕಾರ’ ಎಂದು ಹೇಳಿದ್ದು, ವಿಡಿಯೋದಲ್ಲಿ ಪ್ರಧಾನಿ ಮೋದಿ ನಗುತ್ತಿದ್ದಾರೆ.ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ‘Hello From The Melody Team’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.