ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಗೆದ್ದು ಸಂಸತ್ ಗೆ ಪ್ರವೇಶಿಸಿದ ನಂತರ ಇದೀಗ ಹೆಚ್‌ಡಿಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿದ್ದಾರೆ.

ಹೆಚ್‌ಡಿಕೆ ಸಚಿವರಾದ ನಂತರ ಆಂಧ್ರ ಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದಿದ್ದಾರೆ. ಬೆಳಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸುಪ್ರಭಾತ ಸೇವೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ತಿರುಪತಿಯಿಂದ ಮರಳಿದ ಬಳಿಕ ಸ್ಪೀಕರ್ ಕಚೇರಿಗೆ ತೆರಳಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕುಮಾರಸ್ವಾಮಿಯವರು ರಾಜೀನಾಮೆ ನೀಡಲಿದ್ದಾರೆ.

ಇದೇ ವೇಳೆ ತಿರುಪತಿ ತಿಮ್ಮಪ್ಪ ದರ್ಶನದ ನಂತರ ಮಾತನಾಡಿದ ಅವರು ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಚಿವನಾಗಿ ನನ್ನ ಕೆಲಸ ಯಶಸ್ವಿಯಾಗಲು ವೆಂಕಟೇಶ್ವರನ ಆಶೀರ್ವಾದ ಪಡೆಯಲು ನಾನು ಬಂದಿದ್ದೇನೆ ಎಂದು ಹೆಚ್‌ಡಿಕೆ ತಿಳಿಸಿದ್ದಾರೆ.