೨ನೇ ದಿನವೂ ಮೋದಿ ಧ್ಯಾನ

ಕನ್ಯಾಕುಮಾರಿ- ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದ ಪ್ರಧಾನಿ ಕನ್ಯಾ ಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಎರಡನೇ ದಿನವೂ ಪ್ರಧಾನಿ ನರೇಂದ್ರ ಮೋದಿ ಅವರು ಧ್ಯಾನ ಮುಂದುವರಿಸಿದ್ದಾರೆ. ಈ ನಡುವೆ ಪ್ರವಾಸಿಗೆ ಅನುವು ಮಾಡಿಕೊಡಲಾಗಿದೆ.
ಮೇ ೩೧ ರಂದು ವಿವೇಕಾನಂದ ರಾಕ್ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು,

ನಿನ್ನೆ ರಾತ್ರಿ ಬಹುಪಾಲು ಸಮಯವನ್ನು ಧ್ಯಾನದಲ್ಲಿ ಕಳೆದ ನಂತರ ಬೆಳಿಗ್ಗೆ ಬೇಗನೆ ಎದ್ದ ಪ್ರಧಾನಿ ನರೇಂದ್ರ ಮೋದಿ, ವಿವೇಕಾನಂದ ರಾಕ್ ಸ್ಮಾರಕದಿಂದ ಸೂರ್ಯೋದಯ ಆನಂದಿಸಿದರು ಮತ್ತು ’ದೇವಿ ಪಾದಂ’ ಮುಂದೆ ಸುಮಾರು ೨೦ ನಿಮಿಷಗಳ ಕಾಲ ಧ್ಯಾನ ಮಾಡಿದರು. ಭಗವತಿ ಅಮ್ಮನವರ ಮುಂದೆ ಶಿವನ ಭಕ್ತಿಯಿಂದ ಬಂಡೆಯ ಮೇಲೆ ಧ್ಯಾನಿಸಿದರು.
ವಿವೇಕಾನಂದ ರಾಕ್ ಸ್ಮಾರಕಕ್ಕೆ ಬ್ಯಾಗ್ ಮತ್ತು ಕ್ಯಾಮೆರಾಗಳಿಲ್ಲದೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಸಂದರ್ಶಕರು ದೇವಿ ಪಾದಂ ಸೇರಿದಂತೆ ಸ್ಮಾರಕದ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ೪೫ ಗಂಟೆಗಳ ಕಾಲ ಧ್ಯಾನದಲ್ಲಿರುವ ಧ್ಯಾನ ಮಂದಿರಕ್ಕೆ ಪ್ರವೇಶ ನಿಷೇಧಿಸಲಾಗಿದೆ.
ಸಂದರ್ಶಕರು ದೇವಿ ಪಾದಂ ಸೇರಿದಂತೆ ಸ್ಮಾರಕದ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದಾದರೂ, ಪ್ರಧಾನಿ ನರೇಂದ್ರ ಮೋದಿ ಅವರ ೪೫ ಗಂಟೆಗಳ ಕಾಲ ಧ್ಯಾನದಲ್ಲಿರುವ ಧ್ಯಾನ ಮಂದಿರದಲ್ಲಿ ಬಿಗಿ ಭದ್ರತೆ ಇರುವ ಹಿನ್ನೆಲೆಯಲ್ಲಿ ಯಾರಿಗೂ ಅವಕಾಶ ನೀಡಿಲ್ಲ.
ಎರಡನೇ ದಿನದಲ್ಲಿ ತಮ್ಮ ‘ಧ್ಯಾನ’ವನ್ನು ಮುಂದುವರಿಸಲು ಮತ್ತೆ ಧ್ಯಾನ ಮಂದಿರ ಪ್ರವೇಶಿಸುವ ಮೊದಲು ಸಮುದ್ರದ ಗಾಳಿ ಮತ್ತು ಭವ್ಯವಾದ ೧೩೩ ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆ ವೀಕ್ಷಿಸಿದರು , ಇಂದು ಮಧ್ಯಾಹ್ನ ೩ ಗಂಟೆ ವೇಳೆಗೆ ಧ್ಯಾನ ಪೂರ್ಣಗೊಳಿಸುವ ಸಾಧ್ಯತೆ ಇದೆ.
ಪ್ರಧಾನಮಂತ್ರಿಯವರು ವಿವೇಕಾನಂದ ರಾಕ್ ಸ್ಮಾರಕದಲ್ಲಿ ತಂಗುತ್ತಿದ್ದಂತೆ, ಕರಾವಳಿ ಭದ್ರತಾ ಗ್ರೂಪ್‌ನ ಸ್ಪೀಡ್‌ಬೋಟ್‌ಗಳು ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳು ಸ್ಮಾರಕದ ಬಳಿ ಹಗಲಿರುಳು ಗಸ್ತು ತಿರುಗುತ್ತಿವೆ ಅರಬ್ಬೀ ಸಮದ್ರದಲ್ಲಿ ಬಾರಿ ಭದ್ರತೆ ಒದಗಿಸಲಾಗಿದೆ.

Leave a Reply

Your email address will not be published. Required fields are marked *