ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ 3ರ ಸೀಸನ್ ಮತ್ತೆ ಬರುತ್ತಿದೆ. ಹಿಂದಿಯ ‘ಬಿಗ್ ಬಾಸ್ ಒಟಿಟಿ 3’ ರ ಕಾರ್ಯಕ್ರಮವನ್ನು ಈ ಬಾರಿ ಅನಿಲ್ ಕಪೂರ್ ನಡೆಸಿಕೊಡಲಿದ್ದಾರೆ. ಸಲ್ಮಾನ್ ಖಾನ್ ಈ ಬಾರಿ ಒಟಿಟಿ ಸೀಸನ್ ನಿಂದ ಹಿಂದೆ ಸರಿದಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಕೂಡ ರಿವೀಲ್ ಆಗಿದ್ದು, ಸಲ್ಮಾನ್ ಖಾನ್ ಬದಲು ಅನಿಲ್ ಎಂಟ್ರಿ ಕೊಟ್ಟಿರುವ ಸುಳಿವು ನೀಡಿದ್ದಾರೆ.

ಆರಂಭದಲ್ಲಿ ಒಟಿಟಿ ಸೀಸನನ್ನು ಕರಣ್ ಜೋಹರ್ ಹೋಸ್ಟ್ ಮಾಡಿದರು, ನಂತರ ಎರಡನೇ ಸೀಸನ್ ನಲ್ಲಿ ಸಲ್ಮಾನ್ ಖಾನ್ ಮಾಡಿದರು. ಮೇಗೆ ಒಟಿಟಿ ಪ್ರೀಮಿಯರ್ ಆಗಲಿದೆ ಎನ್ನಲಾಗಿತ್ತು. ಬಿಡುಗಡೆ ಆಗಿರುವ ಈ ಪ್ರೋಮೋದಲ್ಲಿ ಅನಿಲ್ ಕಪೂರ್ ಅವರ ಮುಖ ಕಾಣಿಸಿಲ್ಲ. ಆದರೆ ಧ್ವನಿ ಕೇಳಿಸಿದೆ. ಹಾಗಾಗಿ ಇದು ಪಕ್ಕಾ ಅನಿಲ್ ಕಪೂರ್ ಎಂಬುದು ಖಚಿತವಾಗಿದೆ. ಸಲ್ಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದು ‘ಸಿಕಂದರ್’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಬಿಗ್ ಬಾಸ್ ಕಾರ್ಯಕ್ರಮದ ರೂವಾರಿ ಆಗಿ ಕಾಣಿಸಿಕೊಳ್ಳುತ್ತಿರುವ ಅನಿಲ್ ನಿರೂಪಣೆಯ ಮೇಲೆ ಫ್ಯಾನ್ಸ್ಗೆ ಭಾರೀ ನಿರೀಕ್ಷೆಯಿದೆ.
ಇದನ್ನೂ ಓದಿ : – ಹಿಮಾಚಲ ಪ್ರದೇಶ, ಮಂಡಿ ಜನರು ನನ್ನನ್ನು ಹಾರೈಸುತ್ತಾರೆ – ಕಂಗನಾ ರಣಾವತ್