ವಾಣಿಜ್ಯ ಬಳಕೆಯ ಸಿಲಿಂಡರ್ ದರ 69.50 ರೂ. ಇಳಿಕೆ

ವಾಣಿಜ್ಯ ಬಳಕೆಯ ಸಿಲಿಂಡರ್ ದರ ಮತ್ತೆ ಇಳಿಕೆಯಾಗಿದೆ. ಗ್ರಾಹಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ತೈಲ ಮಾರುಕಟ್ಟೆ ಕಂಪನಿಗಳು ಜೂನ್ 1 ರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 69.50 ರೂ. ಕಡಿತಗೊಳಿಸಿವೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ 1,676 ರಷ್ಟಿದೆ. ದೇಶಾದ್ಯಂತ ಮೆಟ್ರೋ ನಗರಗಳಿಗೂ ಇದು ಅನ್ವಯವಾಗಿದೆ.

ಮುಂಬೈನಲ್ಲಿ ಕೂಡ 69.50 ರೂ. ಇಳಿಕೆಯಾಗಿದ್ದು, ಪರಿಷ್ಕೃತ ಬೆಲೆಯನ್ನು 1,629 ಕ್ಕೆ ನಿಗದಿಪಡಿಸಲಾಗಿದೆ. ಚೆನ್ನೈನಲ್ಲಿ ಬೆಲೆ 1,841.50 ರಷ್ಟಿದ್ದರೆ, ಕೋಲ್ಕತ್ತಾದಲ್ಲಿ ಬೆಲೆ ಕಡಿತದ ನಂತರ 1,789.50 ರೂ. ಆಗಿದೆ. ಮಾರ್ಚ್ 1 ರಂದು 19 ಕೆಜಿ ವಾಣಿಜ್ಯ LPG ಸಿಲಿಂಡರ್‌ ಗಳ ದರ 19 ರೂ. ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ ಗಳು ಮತ್ತು 5 ಕೆಜಿ ಎಫ್‌ ಟಿಎಲ್ ಸಿಲಿಂಡರ್‌ಗಳ ಬೆಲೆ ಕ್ರಮವಾಗಿ 30.50 ರೂ. ಮತ್ತು 7.50 ರೂ. ರಷ್ಟು ಕಡಿತವಾಗಿದ್ದವು. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1 ರಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಇದನ್ನೂ ಓದಿ : – ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಎಸ್‌ಐಟಿ ರಚಿಸಿದ ಸರ್ಕಾರ

ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಬದಲಾವಣೆಗಳು, ತೆರಿಗೆ ನೀತಿಗಳಲ್ಲಿನ ಬದಲಾವಣೆಗಳು ಹಾಗೂ ಪೂರೈಕೆ-ಬೇಡಿಕೆ ಯಂತಹ ವಿವಿಧ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಿಲಿಂಡರ್ ಬೆಲೆ ಪರಿಷ್ಕರಿಸಲಾಗುತ್ತದೆ.

ಇದನ್ನೂ ಓದಿ : – ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲ್ಲುವ ಸ್ಥಾನಗಳೆಷ್ಟು? ಅಂಕಿ ಅಂಶಗಳನ್ನ ಬಿಚ್ಚಿಟ್ಟ ಚಲುವರಾಯಸ್ವಾಮಿ

Leave a Reply

Your email address will not be published. Required fields are marked *