ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ

ಚೆನ್ನೈನಿಂದ ಮುಂಬೈಗೆ ತೆರಳಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಚೆನ್ನೈನಿಂದ ಹೊರಟು ಮುಂಬೈ ವಿಮಾನ ನಿಲ್ದಾಣದಲ್ಲಿ ಸುಮಾರು 8:45 ಕ್ಕೆ ಲ್ಯಾಂಡ್ ಆದ 6E5314 ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಬೆದರಿಕೆಯಿಂದಾಗಿ ಇಡೀ ವಿಮಾನ ಪ್ರಸ್ತುತ ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದೆ.

ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಕಾರ್ಯಚರಣೆ ನಡೆಸಿದ್ದಾರೆ. ಈ ವಿಮಾನದಲ್ಲಿ ಒಟ್ಟು 172 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬಾಂಬ್ ಬೆದರಿಕೆ ಇದೆ ಎಂದು ಗೊತ್ತಾದ ಕೂಡಲೆ ಪ್ರಯಾಣಿಕರು ಹೆದರಿದ್ದಾರೆ ಇಂಡಿಗೋ ಸಿಬ್ಬಂದಿ ವಿಮಾನದ ಶೌಚಾಲಯದಲ್ಲಿ ಬಾಂಬ್ ಇರುವಿಕೆಯನ್ನು ಸೂಚಿಸುವ ಪತ್ರವೊಂದನ್ನು ಕಂಡುಹಿಡಿದಿದ್ದಾರೆ. ನಂತರ ಪ್ರೋಟೋಕಾಲ್ ಅನ್ನು ಅನುಸರಿಸಿ, ವಿಮಾನ ಸುರಕ್ಷಿತವಾಗಿ ಇಳಿಸಲಾಯಿತು. ಭದ್ರತಾ ಕ್ರಮಗಳಿಗಾಗಿ ಪ್ರಯಾಣಿಕರನ್ನು ಪ್ರತ್ಯೇಕ ಸ್ಥಳದಲ್ಲಿ ಇಳಿಸಲಾಯಿತು

ಇದನ್ನೂ ಓದಿ : – ವಾಣಿಜ್ಯ ಬಳಕೆಯ ಸಿಲಿಂಡರ್ ದರ 69.50 ರೂ. ಇಳಿಕೆ

Leave a Reply

Your email address will not be published. Required fields are marked *