ಭಾರತದ ಮಾಜಿ ಪ್ರಧಾನಿ ದೇವೇಗೌಡರ ಎಚ್ಚರಿಕೆ ಬೆನ್ನಲ್ಲೇ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯಾದ ಸಂಸದ ಪ್ರಜ್ವಲ್ ರೆವಣ್ಣರನ್ನು ನಗರಕ್ಕೆ ಕರೆತರುವ ಕೆಲಸ ಮತ್ತಷ್ಟು ಚುರುಕುಗೊಂಡಿದೆ. ಪ್ರಜ್ವಲ್ ಸಂಪರ್ಕಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ, ಪ್ರಜ್ವಲ್ ತಾಯಿ ಭವಾನಿ ರೇವಣ್ಣರ ಕಡೆಯ ಸಂಬಂಧಿಕರ ಮೂಲಕ ಪ್ರಜ್ವಲ್ ದೇಶಕ್ಕೆ ಕರೆಸಲು ಪ್ರಯತ್ನ ನಡೆಯುತ್ತಿದೆ. ವಿದೇಶದಲ್ಲಿರುವ ಪ್ರಜ್ವಲ್ ಸ್ನೇಹಿತರ ಮೂಲಕ ಸಂಪರ್ಕಕ್ಕಕ್ಕೂ ಪ್ರಯತ್ನ ಪಡಲಾಗುತ್ತಿದೆ.

ಇನ್ನು ಮೂರ್ನಾಲ್ಕು ದಿನಗಳಲ್ಲಿ ಪ್ರಜ್ವಲ್ ಕರೆಸಿ ಎಸ್ ಐಟಿ ಮುಂದೆ ಹಾಜರುಪಡಿಸಲು ಶತ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ ನೀಡಿದೆ. ಪ್ರಜ್ವಲ್ ಪಾಸ್ ಪೋರ್ಟ್ ರದ್ದಾದರೆ ಈ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿ ಕುಟುಂಬಕ್ಕೆ ತೀವ್ರ ಮುಜುಗರ ಉಂಟಾಗಲಿದೆ. ಹೀಗಾಗಿ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಜ್ವಲ್ ನನ್ನು ವಿದೇಶದಿಂದ ಕರೆಸಲು ಎಲ್ಲಾ ಆಯಾಮದಲ್ಲೂ ಕುಟುಂಬಸ್ಥರು ಪ್ರಯತ್ನ ಪಡುತ್ತಿದ್ದಾರೆ.
ಇದನ್ನೂ ಓದಿ : – ಎಣ್ಣೆ ಪ್ರಿಯರಿಗೆ ಶಾಕ್ – ಕರ್ನಾಟಕದಲ್ಲಿ 5 ದಿನ ಬಾರ್ ಬಂದ್..!