ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಇದಾಗಲೇ ನಟ ದರ್ಶನ್ ನನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ6, ಎ7 ಆರೋಪಿಗಳನ್ನು ಚಿತ್ರದುರ್ಗ ಡಿವೈ ಎಸ್ಪಿ ಕಾಮಾಕ್ಷಿಪಾಳ್ಯ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ.

ಎ7 ಆರೋಪಿಯಾದ ಅನುಕುಮಾರ್ ತಂದೆ ಚಂದ್ರಣ್ಣ (60) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಆರೋಪಿ ಮಗನ ಬಂಧನದಿಂದ ಮನನೊಂದ ತಂದೆ ಚಿತ್ರದುರ್ಗದ ಸಿಹಿ ನೀರು ಹೊಂಡ ಬಳಿಯ ಮನೆಯಲ್ಲಿ ಸಾವಿಗೀಡಾಗಿದ್ದಾರೆ.

ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಸಂಜಯ್ ಗೌಡ್ ನೇತೃತ್ವದಲ್ಲಿ ಎ6 ಆರೋಪಿ ಜಗ್ಗ ಅಲಿಯಾಸ್ ಜಗದೀಶ್, ಎ7 ಆರೋಪಿ ಅನಿ ಅಲಿಯಾಸ್ ಅನುಕುಮಾರ್ ಇಬ್ಬರನ್ನೂ ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.