ಜೂನ್ 8ರಿಂದ 12 ರವರೆಗೆ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. KPTCL ಮತ್ತು ಬೆಸ್ಕಾಂನಿಂದ ಮುಂದಿನ ಕೆಲವು ದಿನಗಳಲ್ಲಿ ನಿರ್ವಹಣಾ ಕಾರ್ಯಗಳನ್ನು ನಿಗದಿಪಡಿಸಲಾಗಿದ್ದು, ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಕ್ವೀನ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಮಿಲ್ಲರ್ಸ್ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ಅಲಿ ಅಸ್ಕರ್ ರಸ್ತೆ, ಚಾಂದಿನಿ ಚೌಕ್, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ಬಂಬೂ ಬಜಾರ್ ರಸ್ತೆ, ಬ್ರಾಡ್ ವೇ ರಸ್ತೆ, ಕಾಕ್‌ಬರ್ನ್ ರಸ್ತೆ, ಸೆಪಿಂಗ್ಸ್ ರಸ್ತೆ, ಬೌರಿಂಗ್ ಆಸ್ಪತ್ರೆ, ಇನ್‌ಫೆಂಟ್ರಿ ರಸ್ತೆ, ವಿವಿ ಟವರ್‌ಗಳು, ಎಂಎಸ್ ಬಿಲ್ಡಿಂಗ್, ಸಿಐಡಿ, ಎಂಇಜಿ ಸೆಂಟರ್, ರಾಜಭವನ, ವಸಂತನಗರ, ವಿಧಾನ ಸೌಧ ಮತ್ತು ವಿಕಾಸ ಸೌಧದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿದೆ.

ಜೂನ್ 11 ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಆಡುಗೋಡಿ, ಸಾಲರ್ಪುರಿಯ ಟವರ್, ಚಿಕ್ಕ ಆಡುಗೋಡಿ, ನಂಜಪ್ಪ ಲೇಔಟ್, ಚಿಕ್ಕ ಲಕ್ಷ್ಮಯ್ಯ ಲೇಔಟ್, ವಿಲ್ಸನ್ ಗಾರ್ಡನ್, ಲಕ್ಕಸಂದ್ರ ಮತ್ತು ಲಾಲ್ಜಿನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಬಹುದಾಗಿದೆ.