10 ವರ್ಷವಾದರೂ ಕಾಂಗ್ರೆಸ್ಗೆ 100ರ ಗಡಿ ತಲುಪುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಮೋದಿ ಕಾಂಗ್ರೆಸ್ ಗೆ ಟೀಕಿಸಿದ್ದಾರೆ. ದೆಹಲಿಯಲ್ಲಿ ನಡೆದ ಎನ್ಡಿಎ ನಾಯಕರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ 10 ವರ್ಷ ಕಳೆದರೂ 100 ಸ್ಥಾನದ ಗಡಿ ತಲುಪುವುದಕ್ಕೆ ಸಾಧ್ಯವಾಗಲಿಲ್ಲ. ಕಳೆದ 3 ಅವಧಿಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಒಟ್ಟು ಸ್ಥಾನ, ಈ ಬಾರಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಸ್ಥಾನಕ್ಕಿಂತಲೂ ಕಡಿಮೆಯಾಗಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಈ ಸಲದ ಲೋಕಸಭೆ ಚುನಾವಣೆಯಲ್ಲಿ 99 ಸ್ಥಾನ ಗೆದ್ದಿದೆ. 2014ರಲ್ಲಿ 44 ಹಾಗೂ 2019ರಲ್ಲಿ 52 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ನಾವು ಎಂದಿಗೂ ಸೋತಿಲ್ಲ. ಜೂನ್ 4ನೇ ತಾರೀಖು ನಾವು ಗೆಲುವನ್ನು ಹೇಗೆ ಜೀರ್ಣಿಸಿಕೊಳ್ಳಬೇಕು ಎನ್ನುವುದನ್ನು ತೋರಿಸಿದೆ. ಈ ಗೆಲುವನ್ನು ಒಪ್ಪಿಕೊಳ್ಳದೇ ಇದರ ಮೇಲೆ ಸೋಲಿನ ನೆರಳು ಹಾಕುವ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಪ್ರಯತ್ನಗಳು ಫಲಪ್ರದವಾಗಲ್ಲ ಮತ್ತು ಅವುಗಳೆಲ್ಲವೂ ಬಹಳ ಅಲ್ಪಾವಧಿಯಲ್ಲಿಯೇ ಕೊನೆಗೊಳ್ಳುತ್ತವೆ ಎಂದು ಮೋದಿ ತಿಳಿಸಿದ್ದಾರೆ.