ಬಾಲಿವುಟ್ ನಟ ವರುಣ್ ಧವನ್ ಮತ್ತು ಪತ್ನಿ ನತಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವರುಣ್ ಪತ್ನಿ ನತಾಶಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಕೊರೊನಾ ಸಮಯದಲ್ಲಿ 2021ರ ಜನವರಿ 24ರಂದು ಮದುವೆ ಆಗಿದ್ದರು. ವರುಣ್ ಧವನ್ ಮತ್ತು ನತಾಶಾ ದಲಾಲ್ ದಂಪತಿ ಕಳೆದ ಫೆಬ್ರವರಿ 18 ರಂದು ತಂದೆ-ತಾಯಿಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದರು. ವರುಣ್ ತಂದೆ ಡೇವಿಡ್ ಧವನ್ ತಾತನಾದ ಬಗ್ಗೆ ಖುಷಿ ಹಂಚಿಕೊಂಡಿದ್ದು, ಸದ್ಯ ವರುಣ್ ಹಾಗೂ ಪತ್ನಿ ನತಾಶಾಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ವರುಣ್ ಧವನ್ ಅವರಿಗೆ ಹೆಣ್ಣು ಮಗು ಆಗಬೇಕೆಂಬ ಆಸೆ ಇತ್ತು. ಹಿಂದೊಮ್ಮೆ ಕರಣ್ ಜೋಹರ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಖುದ್ದು ವರುಣ್ ಧವನ್ ಈ ಮಾತನ್ನ ಹೇಳಿದ್ದರು. ಬಾಲಿವುಡ್ ನ ಸ್ಟಾರ್ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಕರಣ್ ಜೋಹರ್ ಕೂಡ ವರುಣ್ ಧವನ್ ಮತ್ತು ನತಾಶಾ ದಲಾಲ್ಗೆ ಶುಭಾಶಯವನ್ನ ಕೋರಿದ್ದಾರೆ.
ಇದನ್ನೂ ಓದಿ : – lokhasabha election : ಸ್ಮೃತಿ ಇರಾನಿ, ಮೇನಕಾ ಗಾಂಧಿಗೆ ಸೋಲು