ಲೋಕಸಭೆ ಚುನಾವಣೆ ಫಲಿತಾಂಶ ಬಿಜೆಪಿಯ ಕೆಲವು ಘಟಾನುಘಟಿ ನಾಯಕರಿಗೆ ಹಿನ್ನಡೆಯಾಗಿದೆ. ಅವರಲ್ಲಿ ಕೆಲವರು 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದವರು. ಆದರೆ ಈ ಬಾರಿ ಅವರ ಗೆಲುವು ಕಷ್ಟಕರವಾಗಿದೆ. 2019 ರ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿಯನ್ನು ಸೋಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಮೇನಕಾ ಗಾಂಧಿ ಕೂಡ ಸುಲ್ತಾನ್ ಪುರದಲ್ಲಿ ಹಿನ್ನಡೆಯಲ್ಲಿದ್ದಾರೆ.

ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಆರಂಭಿಕ ಟ್ರೆಂಡ್‌ಗಳಲ್ಲಿ ಮೇನಕಾ ಗಾಂಧಿ ಹಿನ್ನಡೆ ಅನುಭವಿಸಿದ್ದಾರೆ. ಸಮಾಜವಾದಿ ಪಕ್ಷದ ರಾಂಭುವಲ್ ನಿಶಾದ್ ಅವರಿಗಿಂತ ಮುಂದಿದ್ದಾರೆ. ಅಮೇಥಿಯ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಸ್ಮೃತಿ ಇರಾನಿ ಅವರಿಗಿಂತ ಬಹಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಸದ್ದು ಮಾಡಿದ್ದ ಸ್ಮೃತಿ ಈ ಬಾರಿ ಸಂಪೂರ್ಣ ಭಿನ್ನವಾಗಿ ಕಾಣುತ್ತಿದ್ದಾರೆ. ಈ ಸ್ಥಾನ ತಮ್ಮ ಕೈ ತಪ್ಪುತ್ತದೆ ಎಂದು ಬಿಜೆಪಿಯವರು ಊಹಿಸಿರಲಿಲ್ಲ. ಇದನ್ನೂ ಓದಿ : – ಮೈಸೂರಿನಲ್ಲಿ ಯದುವೀರ್ ನಾಮಫಲಕಕ್ಕೆ ಪೂಜೆ
ಬಿಜೆಪಿಗೆ ರಾಮ ಮಂದಿರದಿಂದ ಯಾವುದೇ ಲಾಭವಾದಂತೆ ಕಾಣಿಸುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಹಿನ್ನಡೆ ಅನುಭವಿಸಿದ್ದು, ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಮುನ್ನಡೆಯಲ್ಲಿದ್ದಾರೆ. ಮುಜಾಫರ್ ನಗರದಲ್ಲೂ ಬಿಜೆಪಿಗೆ ಆಘಾತಕಾರಿ ಸುದ್ದಿಯಿದೆ. ಸಂಜೀವ್ ಬಾಲಯನ್ ಸಮಾಜವಾದಿ ಪಕ್ಷದ ಹರೇಂದ್ರ ಸಿಂಗ್ ಮಲಿಕ್ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ. 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸಂಜೀವ್ ಬಾಲಯನ್ ಗೆದ್ದಿದ್ದರು.
ಭೋಜ್ ಪುರಿ ಚಲನಚಿತ್ರದ ಸೂಪರ್ ಸ್ಟಾರ್ ನಿರಾಹುವಾ ಅಜಂಗಢ ಹಿನ್ನಡೆ ಅನುಭವಿಸಿದ್ದಾರೆ. ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಬಹಳ ಮುಂದಿದ್ದಾರೆ. ಅಖಿಲೇಶ್ ಯಾದವ್ 2019 ರ ಲೋಕಸಭಾ ಚುನಾವಣೆಯಲ್ಲಿ ಅಜಂಗಢದಿಂದ ಗೆದ್ದಿದ್ದರು.
ಇದನ್ನೂ ಓದಿ : – ಹೆಂಡತಿ ಗೆಲ್ಲಬೇಕೆಂದು ನಟ ಶರತ್ ಕುಮಾರ್ ಉರುಳು ಸೇವೆ