ತಮಿಳು ನಟಿ ರಾಧಿಕಾ ಶರತ್ ಕುಮಾರ್ ಈ ಬಾರಿ ತಮಿಳು ನಾಡಿನ ವಿರುದುನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇಂದು ಚುನಾವಣೆ ಫಲಿತಾಂಶ ಘೋಷಣೆ ಆಗಲಿದ್ದು, ಅದಕ್ಕೂ ಮುನ್ನ ನಟ ಶರತ್ ಕುಮಾರ್ ತನ್ನ ಪತ್ನಿ ಗೆಲ್ಲಲಿ ಎಂದು ಉರುಳು ಸೇವೆ ಮಾಡಿದ್ದಾರೆ. ರಾಧಿಕಾ ದಂಪತಿ ಭಾನುವಾರ ರಾತ್ರಿ ವಿರುದುನಗರ ಶ್ರೀ ಪರಾಶಕ್ತಿ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶರತ್ ಕುಮಾರ್ ದೇವಸ್ಥಾನದ ಆವರಣದಲ್ಲಿ ಅಮ್ಮನವರಿಗೆ ಪ್ರದಕ್ಷಿಣೆ ಹಾಕಿದ ಬಳಿಕ ಉರುಳುಸೇವೆ ಮಾಡಿದರು. 2006 ರಲ್ಲಿ ರಾಧಿಕಾ ಶರತ್ ಕುಮಾರ್ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ಪತಿ ಶರತ್ ಕುಮಾರ್ ಜೊತೆ ಎಐಎಡಿಎಂಕೆ ಸೇರಿದರು. ಅದೇ ವರ್ಷದಲ್ಲಿ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಅವರನ್ನು ವಜಾಗೊಳಿಸಲಾಯಿತು. 2007 ರಲ್ಲಿ ಅವರು ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (ಎಐಎಸ್ಎಂಕೆ) ಪಕ್ಷವನ್ನು ಸ್ಥಾಪಿಸಿ, ಅವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆದರೆ ಕೆಲ ದಿನಗಳ ಹಿಂದೆ ಎಐಎಸ್ಎಂಕೆ ಬಿಜೆಪಿಯೊಂದಿಗೆ ವಿಲೀನಗೊಂಡಿತು. ಬಳಿಕ ಅವರು ಬಿಜೆಪಿ ಟಿಕೆಟ್ ಪಡೆದರು. ರಾಧಿಕಾ ಶರತ್ ಕುಮಾರ್ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರೆ, ಇತ್ತೀಚೆಗಷ್ಟೇ ನಿಧನರಾದ ಕ್ಯಾಪ್ಟನ್ ವಿಜಯಕಾಂತ್ ಅವರ ಪುತ್ರ ವಿಜಯ್ ಪ್ರಭಾಕರನ್ ಎಐಡಿಎಂಕೆ ಪಕ್ಷದಿಂದ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ : – ಮೈಸೂರಿನಲ್ಲಿ ಯದುವೀರ್ ನಾಮಫಲಕಕ್ಕೆ ಪೂಜೆ