ಬೆಂಗಳೂರು ಗ್ರಾಮಾಂತರದಲ್ಲಿ ಡಾ ಮಂಜುನಾಥ್ ಗೆಲುವು ನಿಶ್ಚಿತ – ಮುನಿರತ್ನ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಅವರು ಸದ್ಯ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ.

ಮಧ್ಯಾಹ್ನ ಒಂದು ಗಂಟೆ ವೇಳೆ ಅದು ಮೂರು ಪಟ್ಟು ಹೆಚ್ಚಾಗುತ್ತದೆ ದೊಡ್ಡಮಟ್ಟದ ಲೀಡ್ ನಲ್ಲಿ ಗೆಲ್ಲುತ್ತಾರೆ . ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರದಲ್ಲಿ ಡಾ ಮಂಜುನಾಥ್ ಗೆಲುವು ನಿಶ್ಚಿತ. ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣದಲ್ಲಿ ನಮ್ಮ ಪಕ್ಷದ ಶಕ್ತಿ ಹೆಚ್ಚಿದೆ. ಈಗಾಗಲೇ ಅರ್ಧ ಮತ ಎಣಿಕೆ ಮುಗಿದಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಅವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಹೀಗಾಗಿ ಕನಕಪುರದಲ್ಲಿ ಸೆಕ್ಯುರಿಟಿ ಹೆಚ್ಚಿಸಿ ಎಂದು ಹೇಳಿದರು.

ಈ ಹಿಂದೆಯೇ ಚುನಾವಣಾ ಆಯೋಗಕ್ಕೆ ನಾವು ಮನವಿ ಮಾಡಿದ್ದೇವೆ. ಸ್ವತಃ ಡಾ ಮಂಜುನಾಥ್ ಅವರು ಕೂಡ ಶಾಂತಿ ಕಾಪಾಡಲು ಭದ್ರತೆ ಕೈಗೊಳ್ಳುವಂತೆ ಮನವಿ ಮಾಡಿದ್ದರು . ಇದೀಗ ಮಂಜುನಾಥ್ ಅವರು ಭಾರೀ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಗೆಲುವು ಸಾಧಿಸಲಿರುವ ಹಿನ್ನೆಲೆ ಬಿಜೆಪಿ ಕಚೇರಿಗೆ ಕಾರ್ಯಕರ್ತರು ಜಮಾವಣೆ ಆಗುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಕಾರ್ಯಕರ್ತರು ಹೆಚ್ಚುತ್ತಿದ್ದಾರೆ ಎಂದು ಮುನಿರತ್ನ ತಿಳಿಸಿದ್ದಾರೆ.

ಇದನ್ನೂ ಓದಿ : – ಆದಿಚುಂಚನಗಿರಿ ಮಠದಲ್ಲಿ ಹೆಚ್‍ಡಿಕೆ ವಿಶೇಷ ಪೂಜೆ ಸಲ್ಲಿಕೆ

Leave a Reply

Your email address will not be published. Required fields are marked *