ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಂದು 11ನೇ ಪಾಯಿಂಟ್ ನಲ್ಲಿ ಬದಲಿಗೆ ಕಾಡಿನಲ್ಲಿ ಉತ್ಖನನ ನಡೆದಿದ್ದು, ಬಂಗ್ಲಗುಡ್ಡದ ಅರಣ್ಯದ ಮಧ್ಯದೊಳಗೆ ಮತ್ತೊಂದು ಕಳೇಬರ ಪತ್ತೆಯಾಗಿದೆ ಎನ್ನಲಾಗಿದೆ
ಇಂದು ಉತ್ಖನನ ಕಾರ್ಯಕ್ಕೆ ಮುನ್ನ ದೂರುದಾರ 11 ನೇ ಪಾಯಿಂಟ್ ಗುಡ್ಡದ ಮೇಲೆ ಕರೆದೊಯ್ದಿದ್ದಾನೆ.
11ನೇ ಪಾಯಿಂಟ್ ನಲ್ಲಿ ಅಸ್ಥಿ ಪಂಜರಗಳು ಸಿಕ್ಕುವುದು ಅನುಮಾನವೆಂದು ಗುಡ್ಡದ ಬಳಿಗೆ ಕರೆದೊಯ್ದಿದ್ದಾನೆ. ಎಸ್‌ಐಟಿ ಅಧಿಕಾರಿಗಳ ತಂಡದ ಸಮ್ಮುಖದಲ್ಲಿ ಕಾರ್ಮಿಕರು ಮಣ್ಣು ಅಗೆದಿದ್ದು, ತಲೆ ಬುರಡೆ ಮತ್ತೆ ಮೂಳೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಕಳೇಬರ ಸಿಕ್ಕ ಜಾಗಕ್ಕೆ ಉಪ್ಪಿನ ಮೂಟೆ ರವಾನೆ ಮಾಡಲಾಗಿದೆ.
ಸುಮಾರು 3 ಗಂಟೆಗಳ ಕಾರ್ಯಾಚರಣೆ ಬಳಿಕ ಕಳೇಬರ ಪತ್ತೆಯಾಗಿದೆ. ಊಟಕ್ಕೂ ಕೂಡ ಬ್ರೇಕ್ ತಗೊಳ್ಳೋದೆ ಡಿಗ್ಗಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ನಾಲ್ಕು ದಿನಗಳ ಕಾದ ಕಾರ್ಯಾಚರಣೆಯಲ್ಲಿ 10 ಪಾಯಿಂಟ್ ಗಳಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು. ಅದರಲ್ಲಿ 6ನೇ ಪಾಯಿಂಟ್ ನಲ್ಲಿ ಮಾತ್ರ ಕಳೇಬರ ಪತ್ತೆಯಾಗಿತ್ತು. ಇದೀಗ ಅನಾಮಿಕ ತೋರಿಸಿದ ಪಾಯಿಂಟ್ ಬದಲಿಗೆ ಮತ್ತೊಂದು ಜಾಗದಲ್ಲಿ ಮೂಳೆಗಳು ಪತ್ತೆಯಾಗಿದ್ದು ಕುತೂಹಲ ಕೆರಳಿಸಿದೆ.