ಅತ್ಯಾಚಾರ-ಕೊಲೆಯಾದ ವೈದ್ಯೆ ಪೋಷಕರಿಗೆ ಆರ್‌ಜಿ ಕರ್ ಆಸ್ಪತ್ರೆಯಿಂದ ಮಾಡಿದ 3 ಫೋನ್‌ ಕರೆಗಳ ವಿವರ ಬಹಿರಂಗ

 ಕೋಲ್ಕತ್ತಾ : ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯ ವಿದ್ಯಾರ್ಥಿನಿಯ ತಂದೆ-ತಾಯಿಗೆ, ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಆಗಸ್ಟ್‌ 9ರ ಬೆಳಿಗ್ಗೆ ಮಾಡಿದ್ದು ಎನ್ನಲಾದ ದೂರವಾಣಿ ಕರೆಯ ವಿವರಗಳು ಗುರುವಾರ ಬಹಿರಂಗವಾಗಿವೆ.
ಆಗಸ್ಟ್ 9 ರ ಬೆಳಿಗ್ಗೆ, ಅರ್ಧ ಗಂಟೆಯೊಳಗೆ ಮೂರು ಕರೆಗಳು ಅವರ ಹತ್ಯೆಗೀಡಾದ ವೈದ್ಯೆಯ ಕುಟುಂಬದ ಪುಟ್ಟ ಪ್ರಪಂಚವನ್ನು ಛಿದ್ರಗೊಳಿಸಿದವು. ಕೋಲ್ಕತ್ತಾ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಾದ ನಂತರ ಬೆಳಿಗ್ಗೆ ಪೋಷಕರಿಗೆ ಕರೆಗಳ ಆಡಿಯೊ ಬಹಿರಂಗವಾಗಿದ್ದು, ಇದರಲ್ಲಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಮೃತ ಕಿರಿಯ ವೈದ್ಯೆಯ ತಂದೆ-ತಾಯಿಗೆ ನೀಡಿದ ಮಾಹಿತಿ ತಪ್ಪಾಗಿತ್ತು ಹಾಗೂ ಮಾಹಿತಿ ನೀಡುವಾಗ ಎಷ್ಟು ಅಪ್ರಬುದ್ಧವಾಗಿ ವರ್ತಿಸಿದ್ದರು ಎಂಬದು ಈಗ ಚರ್ಚೆಗೆ ಗ್ರಾಸವಾಗಿದೆ. ದೂರವಾಣಿ ಕರೆ ಮಾಡಿದ್ದ ಸಿಬ್ಬಂದಿ ‘ವಿವರ ನೀಡುವಾಗ ಮಾತುಗಳನ್ನು ಬದಲಿಸಿರುವುದು ಕೃತ್ಯವನ್ನು ಮುಚ್ಚಿಹಾಕುವ ಯತ್ನ ಆಸ್ಪತ್ರೆಯಿಂದ ನಡೆದಿತ್ತೇ ಎಂಬ ಪ್ರಶ್ನೆಯನ್ನೂ ಮೂಡಿಸಿದೆ. ಆದರೆ ದೂರವಾಣಿ ಕರೆಯ ಆಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ.

ಮೊದಲ ಕರೆ
ಮೊದಲ ಕರೆ 10:53ಕ್ಕೆ ಬಂದಿತ್ತು ಎಂದು ಅತ್ಯಾಚಾರ-ಕೊಲೆ ಸಂತ್ರಸ್ತೆಯ ತಂದೆ-ತಾಯಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕರೆ ಮಾಡಿದವರು ಮಹಿಳೆಯಾಗಿದ್ದು, ಆಸ್ಪತ್ರೆಯ ಸಹಾಯಕ ಸೂಪರಿಂಟೆಂಡೆಂಟ್ ಎಂದು ಹೇಳಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಕೋಲ್ಕತ್ತಾ ಪೊಲೀಸ್ ಟೈಮ್‌ಲೈನ್‌ ಸಹ ಅಧಿಕಾರಿಯು ಈ ಸಮಯದಲ್ಲಿ ಪೋಷಕರಿಗೆ ಕರೆ ಮಾಡಿ “ಅವರಿಗೆ ಮಾಹಿತಿ ನೀಡಿದರು” ಎಂದು ಹೇಳುತ್ತದೆ, ಆದರೆ ಸಂಭಾಷಣೆ ಬಗ್ಗೆ ವಿವರಿಸುವುದಿಲ್ಲ. ಪೊಲೀಸರ ಟೈಮ್‌ಲೈನ್ ಕೇವಲ ಒಂದು ಕರೆಯನ್ನು ಮಾತ್ರ ಉಲ್ಲೇಖಿಸುತ್ತದೆ. ಆದರೆ ಮೂರು ಕರೆಗಳನ್ನು ಮಾಡಲಾಗಿದ್ದು, ಕೊನೆಯ ಕರೆಯಲ್ಲಿ ಮಾತ್ರ ಸಂತ್ರಸ್ತೆಯ ಪೋಷಕರಿಗೆ ಅವಳು ಮೃತಪಟ್ಟಿದ್ದಾಳೆ ಎಂದು ತಿಳಿಸಲಾಗಿದೆ ಎಂದು ಆಡಿಯೊ ಬಹಿರಂಗಪಡಿಸುತ್ತದೆ.
ಕರೆ ವಿವರ..
ಮಹಿಳೆ: ನಾನು ಆರ್‌.ಜಿ. ಕರ್ ಆಸ್ಪತ್ರೆಯಿಂದ ಕರೆ ಮಾಡುತ್ತಿದ್ದೇನೆ. ನೀವು ಇಲ್ಲಿಗೆ ತಕ್ಷಣ ಬರಬಹುದೇ?
ಸಂತ್ರಸ್ತೆಯ ತಂದೆ: ಏನಾಯಿತು, ದಯವಿಟ್ಟು ಹೇಳಿ
ಕರೆ ಮಾಡಿದವರು: ಆಕೆಯ ಸ್ಥಿತಿ ತುಂಬಾ ಕೆಟ್ಟದಾಗಿದೆ, ದಯವಿಟ್ಟು ಆದಷ್ಟು ಬೇಗ ಬನ್ನಿ
ಸಂತ್ರಸ್ತೆಯ ತಂದೆ: ದಯವಿಟ್ಟು ಏನಾಯಿತು ಎಂದು ನಮಗೆ ತಿಳಿಸಿ
ಕರೆ ಮಾಡಿದವರು: ಅದನ್ನು ವೈದ್ಯರು ಹೇಳುತ್ತಾರೆ, ನೀವು ಬೇಗನೆ ಬನ್ನಿ.
ಸಂತ್ರಸ್ತೆಯ ತಂದೆ: ನೀವು ಯಾರು?
ಕರೆ ಮಾಡಿದವರು: ನಾನು, ಸಹಾಯಕ ಸೂಪರಿಟೆಂಡೆಂಟ್, ಡಾಕ್ಟರ್ ಅಲ್ಲ
ಸಂತ್ರಸ್ತೆಯ ತಂದೆ: ಅಲ್ಲಿ ವೈದ್ಯರಿಲ್ಲವೇ?
ಕರೆ ಮಾಡಿದವರು: ನಾನು ಸಹಾಯಕ ಸೂಪರ್. ನಿಮ್ಮ ಮಗಳನ್ನು ತುರ್ತು ಚಿಕಿತ್ಸಾ ಕೊಠಡಿಗೆ ಕರೆತಂದಿದ್ದೇವೆ. ನೀವು ಬಂದು ನಮ್ಮನ್ನು ಸಂಪರ್ಕಿಸಿ.
ಸಂತ್ರಸ್ತೆಯ ತಾಯಿ: ಅವಳಿಗೆ ಏನಾಯಿತು, ಅವಳು ಕರ್ತವ್ಯದಲ್ಲಿದ್ದಳು
ಕರೆ ಮಾಡಿದವರು: ನೀವು ಆದಷ್ಟು ಬೇಗ ಬೇಗ ಬನ್ನಿ.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *