ಸಂಪತ್ತಿನಲ್ಲಿ ಅಂಬಾನಿ ಹಿಂದಿಕ್ಕಿದ ಅದಾನಿ, ಈಗ ಭಾರತದ ನಂಬರ್‌ 1 ಶ್ರೀಮಂತ

ನವದೆಹಲಿ : 2024ರ ಹುರುನ್ ಇಂಡಿಯಾ ಶ್ರೀಮಂತರ  ಪಟ್ಟಿ ಪ್ರಕಟವಾಗಿದ್ದು, ಭಾರತದ ಅತಿ ಶ್ರೀಮಂತರ  ಪಟ್ಟಿಯಲ್ಲಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಗೌತಮ ಅದಾನಿ ಅಗ್ರಸ್ಥಾನಕ್ಕೇರಿದ್ದಾರೆ. ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟವಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಅದಾನಿ ಕುಟುಂಬ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಏರಿದೆ.
ಹುರುನ್ ಇಂಡಿಯಾ ಭಾರತದಲ್ಲಿ 1,539 ಅತಿ ಶ್ರೀಮಂತ ವ್ಯಕ್ತಿಗಳನ್ನು ಗುರುತಿಸಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 220 ಶ್ರೀಮಂತರ ಸಂಖ್ಯೆ ಹೆಚ್ಚಾಗಿದೆ. ಮೊದಲ ಬಾರಿಗೆ, ಪಟ್ಟಿಯು 1,500ಕ್ಕಿಂತ ಹೆಚ್ಚಾಗಿದೆ.
ಗೌತಮ್ ಅದಾನಿ (62) ಮತ್ತು ಅವರ ಕುಟುಂಬ 2024 ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 11.6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಹೊಂದುವ ಮೂಲಕ ಮೊದಲನೇ ಸ್ಥಾನದಲ್ಲಿದೆ. ಅವರ ಸಂಪತ್ತು 95% ರಷ್ಟು ಏರಿಕೆಯಾಗಿದೆ. ಅದಾನಿ ಸಂಪತ್ತಿನ ಗಮನಾರ್ಹ ಏರಿಕೆಗೆ ಅದಾನಿ ಗ್ರೂಪ್ ಘಟಕಗಳ ಷೇರುಗಳ ಬೆಲೆಯಲ್ಲಿ ಗಣನೀಯ ಹೆಚ್ಚಳ ಕಾರಣವಾಗಿದೆ.

ರಿಲಯನ್ಸ್‌ನ ಮುಖೇಶ ಅಂಬಾನಿಕುಟುಂಬವು 10,14,700 ಕೋಟಿ ರೂ.ಗಳ ನಿವ್ವಳ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತಿನಲ್ಲಿ 25%ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.
ಮೂರನೇ ಸ್ಥಾನದಲ್ಲಿ ಎಚ್‌ಸಿಎಲ್‌ನ ಸಂಸ್ಥಾಪಕ ಶಿವ ನಾಡಾರ್ ಮತ್ತು ಕುಟುಂಬ ಇದ್ದು, ಒಟ್ಟು 314,000 ಕೋಟಿ ರೂ. ಸಂಪತ್ತಿನ ಒಡೆಯರಾಗಿದ್ದಾರೆ. ಲಸಿಕೆ ಉದ್ಯಮಿ, ಸೀರಂ ಇನ್ಸ್ಟಿಟ್ಯೂಟ್‌ನ ಸೈರಸ್ ಎಸ್ ಪೂನಾವಲ್ಲಾ ಅವರು 2,89,800 ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದ್ದು, ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ನಂತರದ ಸ್ಥಾನದಲ್ಲಿ 5)ದಿಲೀಪ್ ಶಾಂಘವಿ, 6) ಕುಮಾರಮಂಗಲಂ ಬಿರ್ಲಾ ಕುಟುಂಬ, 7)ಗೋಪಿಚಂದ್ ಹಿಂದೂಜಾ ಕುಟುಂಬ, 8)ರಾಧಾಕಿಶನ್ ದಮಾನಿ ಕುಟುಂಬ, 9)ಅಜೀಮ್ ಪ್ರೇಮ್​ಜಿ ಕುಟುಂಬ, 10)ನೀರಜ್ ಬಜಾಜ್ ಕುಟುಂಬವಿದೆ.
ಹಾರೂನ್‌ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಶತಕೋಟ್ಯಧಿಪತಿಗಳಲ್ಲಿ ರೇಜರ್‌ಪೇ ಅಪ್ಲಿಕೇಶನ್‌ನ ಸಂಸ್ಥಾಪಕರಾದ ಹರ್ಷಿಲ್ ಮಾಥುರ್ ಮತ್ತು ಶಶಾಂಕಕುಮಾರ (ಇಬ್ಬರೂ 33 ವರ್ಷ ವಯಸ್ಸಿನವರು) ಇದ್ದಾರೆ.
2024ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಅತ್ಯಂತ ಕಿರಿಯ ವ್ಯಕ್ತಿ 5 ಬಿಲಿಯನ್ ಡಾಲರ್ ಕ್ವಿಕ್ ಕಾಮರ್ಸ್ ಸ್ಟಾರ್ಟ್‌ಅಪ್ ಜೆಪ್ಟೊದ 21 ವರ್ಷದ ಕೈವಲ್ಯ ವೋಹ್ರಾ ಆಗಿದ್ದಾರೆ. ಜೆಪ್ಟೊದ ಸಹ-ಸಂಸ್ಥಾಪಕ 22 ವರ್ಷದ ಅದಿತ್‌ ಪಲಿಚಾ ಅವರು ಪಟ್ಟಿಯಲ್ಲಿ ಎರಡನೇ ಕಿರಿಯವರಾಗಿದ್ದಾರೆ.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *