ಪಕ್ಕದಲ್ಲಿ ರೈಲು ನಿಂತ್ರೂ ಹಳಿ ಮೇಲೆ ಗಡದ್ದಾಗಿ ಮಲಗಿದ್ದ ಈ ವ್ಯಕ್ತಿ

ನವದೆಹಲಿ : ಜೀವನದ ಜಂಜಾಟವನ್ನು ಮರೆಯಲು ಕೆಲವೊಮ್ಮೆ ಒಳ್ಳೆಯ ನಿದ್ದೆ ಸಾಕಾಗುತ್ತದೆ. ಆದರೆ ಅದರಿಂದ ಜೀವಕ್ಕೆ ಕುತ್ತು ಬರುವ ಸಾಧ್ಯತೆಯೂ ಇರುತ್ತದೆ ಎಂಬುದಕ್ಕೆ ಘಟನೆಯೊಂದು ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ರೈಲ್ವೆ ಹಳಿಯ ಮೇಲೆ ಗಡದ್ದಾಗಿ ನಿದ್ದೆ ಹೋಗಿದ್ದ ವ್ಯಕ್ತಿಯೊಬ್ಬರನ್ನು ರೈಲ್ವೆಯ ಲೋಕೊ ಪೈಲಟ್‌ ಅವರ ಸಮಯ ಪ್ರಜ್ಞೆಯಿಂದ ಜೀವ ಕಳೆದುಕೊಳ್ಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿದ್ದಾರೆ.
ವೈರಲ್‌ ಆದ ವೀಡಿಯೊದಲ್ಲಿ ಪ್ರಯಾಗರಾಜ್‌ನ ರೈಲ್ವೆ ಹಳಿಯ ಮೇಲೆ ವ್ಯಕ್ತಿಯೊಬ್ಬರು ಗಡದ್ದಾಗಿ ನಿದ್ದೆ ಹೊಡೆಯುತ್ತಿರುವುದು ಕಂಡುಬಂದಿದೆ. ಹಳಿಯ ಒಂದು ಪಕ್ಕದ ಕಬ್ಬಿಣದ ಬೀಮ್‌ ಅನ್ನು ತಲೆ ದಿಂಬಾಗಿಸಿ ವ್ಯಕ್ತಿ ಗಡದ್ದಾಗಿ ನಿದ್ದೆಗೆ ಜಾರಿದ್ದಾರೆ. ನೆರಳಿಗಾಗಿ ರೈಲ್ವೆ ಟ್ರ್ಯಾಕ್‌ ಮಧ್ಯದಲ್ಲಿ ಛತ್ರಿ ಬಿಡಿಸಿಟ್ಟು ಅದರ ಕೆಳಗೆ ರೈಲು ಮಾರ್ಗದ ಒಂದು ಹಳಿಯನ್ನು ತಲೆದಿಂಬಾಗಿಸಿ ಅವರು ಮಲಗಿದ್ದಾರೆ. ಅವರಿಗೆ ನಿದ್ದೆ ಎಷ್ಟು ಗಾಢವಾಗಿ ಬಂದಿತ್ತೆಂದರೆ ಸಮೀಪ ರೈಲು ಬಂದಿದ್ದು ಸಹ ಗೊತ್ತಾಗಿಲ್ಲ…!

ಲೋಕೊ ಪೈಲಟ್ ತನ್ನ ರೈಲನ್ನು ನಿಲ್ಲಿಸಿ ಆ ವ್ಯಕ್ತಿಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೊ ತೋರಿಸಿದೆ. ಲೋಕೊ ಪೈಲಟ್ ರೈಲನ್ನು ಮುಂದಕ್ಕೆ ಕೊಂಡೊಯ್ಯುವ ಮೊದಲು ಆತನನ್ನು ಹೋಗಿ ಎಬ್ಬಿಸಿದ್ದಾನೆ. ನಂತರ ಆತ ಎದ್ದು ಹೋಗಿದ್ದಾನೆ.ಆ ವ್ಯಕ್ತಿ ಮನುಷ್ಯನು ಸಾಯುವ ಉದ್ದೇಶದಿಂದ ರೈಲ್ವೆ ಹಳಿಯ ಮೇಲೆ ಮಲಗಿರಲಿಲ್ಲ. ರೈಲ್ವೇ ಹಳಿಯಲ್ಲಿ ಆತ ಮಲಗಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ್ದನಂತೆ…!
ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಘಟನೆಯ ವೀಡಿಯೊವು 7.8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ, ಕೆಲವು ಬಳಕೆದಾರರು “ಹುಚ್ಚು ವ್ಯಕ್ತಿ” ಎಂದು ಕಾಮೆಂಟ್ ಮಾಡಿದ್ದಾರೆ. ಬಳಕೆದಾರರಲ್ಲಿ ಒಬ್ಬರು ಆತ ಮದ್ಯಪಾನದ ನಶೆಯಲ್ಲಿದ್ದ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ವಿಷಯದ ಬಗ್ಗೆ ಗಂಭೀರ ತನಿಖೆ ಮತ್ತು ಸರಿಯಾದ ರೈಲ್ವೆ ಸುರಕ್ಷತಾ ಮಾನದಂಡಗಳ ಅನುಷ್ಠಾನಕ್ಕೆ ಕರೆ ನೀಡಿದರು.

ಮತ್ತೊಂದು ಗಮನಾರ್ಹ ಪ್ರಕರಣದಲ್ಲಿ, ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಪ್ರಚಾರಕ್ಕಾಗಿ ರೈಲ್ವೇ ಹಳಿಗಳ ಮೇಲೆ ವಿವಿಧ ರೀತಿಯ ವಸ್ತುಗಳನ್ನು ಇರಿಸಿ ಭಾರತೀಯ ರೈಲ್ವೆ ಮತ್ತು ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದಕ್ಕೆ ಮುಂದಾದ ಆರೋಪದ ಮೇಲೆ ಯೂಟ್ಯೂಬರ್‌ನನ್ನು ಬಂಧಿಸಿದೆ. ಅಪರಾಧಿ ಗುಲ್ಜಾರ್ ಶೇಖ್ ನನ್ನು ಉತ್ತರ ಪ್ರದೇಶದ ಖಂಡ್ರೌಲಿ ಗ್ರಾಮದಲ್ಲಿರುವ ಆತನ ನಿವಾಸದಿಂದ ಬಂಧಿಸಲಾಗಿದೆ. ರೈಲ್ವೆ ಭದ್ರತೆ ಮತ್ತು ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಕೃತ್ಯಗಳ ಬಗ್ಗೆ ವರದಿ ಮಾಡದಂತೆ ಆರ್‌ಪಿಎಫ್ ಸಾರ್ವಜನಿಕರಿಗೆ ಮನವಿ ಮಾಡಿದೆ.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *