ಘಟಪ್ರಭಾ ನದಿಯ ಅಬ್ಬರಕ್ಕೆ ಊರಿಗೆ ಊರೇ ಮುಳುಗಡೆ

ಬೆಳಗಾವಿ: ಘಟಪ್ರಭಾ ನದಿಯ ಅಬ್ಬರಕ್ಕೆ ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮದಲ್ಲಿರುವ 500ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿ ಊರಿಗೆ ಊರೇ ಜಲ ಪ್ರಳಯದಲ್ಲಿ ಮುಳುಗಿಹೊಗಿದೆ.

ನೆರೆಯ ಭೀಕರತೆ ಎಷ್ಟಿದೆ ಎಂದರೆ ಪಬ್ಲಿಕ್ ಟಿವಿಯ ಡ್ರೋಣ್‌ ಕ್ಯಾಮೆರಾದ ದೃಶ್ಯ ಗಳನ್ನು ನೋಡಿದರೆ ಮೈ ಜುಂ ಅನಿಸುತ್ತದೆ. 

500 ಮನೆಗಳ ಇಡಿ ಗ್ರಾಮವನ್ನು ಸುತ್ತುವರೆದಿರುವ ನದಿ ಹೊಲ ಗದ್ದೆ, ದೇವಸ್ಥಾನ ಮನೆಗಳು ನೀರಿನಲ್ಲಿ ತೇಲಿ ಅವಾಂತರ ಸೃಷ್ಟಿಸಿದೆ. ತುಂಬಿದ ಮನೆಗಳಲ್ಲಿ 80% ನೀರು ತುಂಬಿ ಬದುಕು ದುಸ್ತರವಾಗಿದೆ.

ಮನೆಗಳ ಅರ್ಧದಷ್ಟು ಭಾಗ ನೀರಿನಲ್ಲಿ ಮುಳುಗಿದೆ. ನಡು ರಸ್ತೆಯಲ್ಲಿಯೇ ಸೊಂಟದ ಮಟ್ಟದವರೆಗೆ ನೀರು ನಿಂತಿದೆ. 2019, 2021ರಲ್ಲೂ ಸಹ ಮುಳುಗಿ ಮೆಳವಂಕಿ ಗ್ರಾಮ ನಡು ಗಡ್ಡೆಯಂತಾಗಿತ್ತು. ಈಗ ಮತ್ತೊಮ್ಮೆ ನೀರಿನಲ್ಲಿ ಗ್ರಾಮ ಮುಳುಗಿದೆ.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *