ವಿನಯ್ ಗೌಡ- ‘ಡೆವಿಲ್’ ಸಿನಿಮಾ ಕೈತಪ್ಪಿದರೆ ನಿಜಕ್ಕೂ ಬೇಸರ ಆಗುತ್ತೆ’

‘ಬಿಗ್ ಬಾಸ್’ ಮನೆಯ ಆನೆ ವಿನಯ್ ಗೌಡಗೆ ದೊಡ್ಮನೆ ಆಟದ ನಂತರ ಸಿನಿಮಾಗೆ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಅದರಲ್ಲಿ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕೂಡ ಒಂದು. ಇದೀಗ ಸಿನಿಮಾ ಕಂಪ್ಲಿಟ್ ಆಗುತ್ತಾ, ಇಲ್ವಾ ಅಂತ ಚಿತ್ರತಂಡ ತಲೆಬಿಸಿ ಮಾಡಿಕೊಂಡಿದೆ. ಇದರ ನಡುವೆ ಡೆವಿಲ್ ಸಿನಿಮಾ ಬಗ್ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್‌ನಿಂದ ಬಂದ್ಮೇಲೆ ‘ಡೆವಿಲ್’ ನಾನು ನಟಿಸಿದ ಪ್ರಾಜೆಕ್ಟ್. ‘ಡೆವಿಲ್’ ಡೈರೆಕ್ಟರ್ ಮಿಲನ ಪ್ರಕಾಶ್ ಅವರ ನಿರ್ಮಾಣದ ಧಾರಾವಾಹಿಗಳಲ್ಲಿ ನಾನು ನಟಿಸಿದ್ದೇನೆ. ನನ್ನ ನಟನೆ ಏನು ಅಂತ ಅವರು ನೋಡಿದ್ದರು. ಹಾಗಾಗಿ ನನ್ನ ಕರೆಸಿ ನೆಗೆಟಿವ್ ಶೇಡ್ ಪಾತ್ರ ಇದೆ, ಒಳ್ಳೆಯ ಸ್ಟಾರ್ ಮುಂದೆ ವಿಲನ್ ಪಾತ್ರ ಅಂತ ಹೇಳಿದರು. ಆ ಮೇಲೆ ನನಗೆ ಅದು ‘ಡೆವಿಲ್’ ಸಿನಿಮಾ ಎಂದು ತಿಳಿಯಿತು. ನನ್ನ ಭಾಗದ 30% ಶೂಟಿಂಗ್ ಆಗಿದೆ. ಇನ್ನೂ ಡೈಲಾಗ್, ದರ್ಶನ್ ಜೊತೆಗಿನ ಒಂದಷ್ಟು ಶೂಟಿಂಗ್ ಬಾಕಿ ಇದೆ ಎಂದು ವಿನಯ್ ಹಂಚಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಕಾನೂನು ವ್ಯವಸ್ಥೆಯ ಅಡಿಯಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ನಾನು ದರ್ಶನ್ ಅವರ ಬಗ್ಗೆ ಮಾತಾಡೋದು ಸರಿ ಇಲ್ಲ. ಎಲ್ಲವೂ ಖುಷಿ ಖುಷಿಯಾಗಿ ಮುಗಿಯಲಿ ಅಂತ ಬಯಸುವೆ ಎಂದು ವಿನಯ್ ಗೌಡ ಹೇಳಿದ್ದಾರೆ.

ನಾನು ಈ ಪ್ರಾಜೆಕ್ಟ್ ಬಗ್ಗೆ ನೆಗೆಟಿವ್ ಆಗಿ ಯೋಚನೆ ಮಾಡೋದಿಲ್ಲ. ನನಗೆ ‘ಡೆವಿಲ್’ ಸಿನಿಮಾ ಒಳ್ಳೆಯ ಪ್ರಾಜೆಕ್ಟ್ ಆಗಿತ್ತು. ಇದು ಕೈತಪ್ಪಿದರೆ ನಿಜಕ್ಕೂ ಬೇಸರ ಆಗತ್ತೆ, ಅದರಲ್ಲಿ ಸಂದೇಹ ಇಲ್ಲ ಎಂದು ವಿನಯ್ ಹೇಳಿದ್ದಾರೆ.

‘ಡೆವಿಲ್’ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರಾವಳಿ ಬೆಡಗಿ ರಚನಾ ರೈ ನಾಯಕಿಯಾಗಿ ನಟಿಸಿದರು. 30%ರಷ್ಟು ಶೂಟಿಂಗ್ ನಡೆದಿತ್ತು. ಆದರೆ ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ದರ್ಶನ್‌ರನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *