ರೀಲ್ಸ್‌ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ

ರೀಲ್ಸ್‌ ಮಾಡಲು ಹೋಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ಯುವತಿಯೋಬಳು ರೀಲ್ಸ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದು ಕೊಂಡಿದ್ದಾಳೆ. ರೀಲ್ಸ್​ ಮಾಡಲು ಹೋಗಿ 25 ವರ್ಷದ ಯುವತಿ ಬಲಿಯಾಗಿದ್ದಾಳೆ.

ಕಾರು ಚಲಾವಣೆ ಮಾಡಲು ಹೋಗಿ ಆಕ್ಸಿಲರೇಟರ್ ಒತ್ತಿದ ಪರಿಣಾಮ ಕಾರು ರಿವರ್ಸ್ ಹೋಗಿ ಪ್ರಪಾತಕ್ಕೆ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಸುಲಿಭಂಜನ್ ಗ್ರಾಮದಲ್ಲಿ ಘಟನೆ ನಡೆದಿದೆ. ಶ್ವೇತಾ (25) ಮೃತ ದುರ್ದೈವಿ. ಶ್ವೇತಾ ತನ್ನ ಮೂವರು ಸ್ನೇಹಿತರ ಜತೆಗೆ ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ಪ್ರವಾಸಕ್ಕೆ ತೆರಳಿದ್ದಳು. 

ಶ್ವೇತಾ ಮೊಬೈಲ್ ರೀಲ್ಸ್‌ಗಾಗಿ ಕಾರು ಓಡಿಸುತ್ತೇನೆ ಎಂದು ಸ್ನೇಹಿತನಿಗೆ ಹೇಳಿದಳು. ಇದಕ್ಕೆ ಒಪ್ಪಿದ ಸ್ನೇಹಿತ ವಿಡಿಯೋ ಚಿತ್ರೀಕರಿಸುತ್ತಿದ್ದ. ಕಾರಿನೊಳಗೆ ಕುಳಿತ ಶ್ವೇತಾ ರಿವರ್ಸ್ ಗೇರ್‌ನಲ್ಲಿದ್ದ ಕಾರನ್ನು ಚಲಾಯಿಸಿದ್ದಾಳೆ. ಏಕಾಏಕಿ ಜೋರಾಗಿ ಎಕ್ಸಿಲೇಟರ್‌ ಹೊತ್ತಿದ್ದಾಳೆ.

ಅಷ್ಟೇ ನೋಡ ನೋಡುತ್ತಿದ್ದಂತೆ ಜಸ್ಟ್‌ 15 ಸೆಕೆಂಡ್‌ನಲ್ಲೇ ಯುವತಿ ಕಾರು ಸಮೇತ ಪ್ರಪಾತಕ್ಕೆ ಬಿದ್ದಿದ್ದಾಳೆ. ಪ್ರಪಾತಕ್ಕೆ ಬಿದ್ದ ರಭಸಕ್ಕೆ ಕಾರು ಛಿದ್ರ ಛಿದ್ರವಾಗಿದ್ದರೆ ಶ್ವೇತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.  ಅಲ್ಲಿಂದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು. ಇನ್ನು ಈ ಆಕ್ಸಿಡೆಂಟ್ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 

Leave a Reply

Your email address will not be published. Required fields are marked *