ದರ್ಶನ್‌ ನನ್ನು ಬ್ಯಾನ್ ಮಾಡೋಕೆ ಆಗೊಲ್ಲ – ಬಿ.ಸಿ ಪಾಟೀಲ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಒಟ್ಟು 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೋಗಿರುವ ಜೀವವಂತೂ ವಾಪಸ್ಸು ಬರೊಲ್ಲ, ಅವರಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಖಂಡಿತಾ ಶಿಕ್ಷೆಯಾಗಬೇಕು ಎಂದು ಹೇಳಿದರು. ಚಿತ್ರರಂಗದಿಂದ ದರ್ಶನ್ ಬ್ಯಾನ್ ಮಾಡುವುದರಿಂದ ಪ್ರಯೋಜನವಿಲ್ಲ.  

ಬ್ಯಾನ್ ಮಾಡೋಕೆ ಆಗೊಲ್ಲ ಎಂದು ಚಿತ್ರರಂಗದವರೇ ಹೇಳಿದ್ದಾರೆ, ತೀರ್ಪು ಬರುವ ತನಕ ತೀರ್ಮಾನ ಮಾಡೊಲ್ಲ ಈಗಾಗಲೇ ಅವರು ಜೈಲಿನಲ್ಲಿ ಇದ್ದಾರೆ, ಈಗಿನ್ನೂ ಅವರು ಆರೋಪಿಯಷ್ಟೇ ಅಪರಾಧಿಯಲ್ಲ. ಯಾರು ಆರೋಪಿಗಳು ಇದ್ದಾರೆ ಅವರಿಗೆ ಶಿಕ್ಷೆಯಾಗಿ ನೊಂದವರಿಗೆ ನ್ಯಾಯ ಸಿಗಬೇಕು. ನಾನು ಪೋಲಿಸ್ ಅಧಿಕಾರಿ ಆಗಿದ್ದವನು, ದೂರಿನಲ್ಲಿ A1, A2 ಆರೋಪಿಗಳಿಂದ A17, A18 ಗಳ ಸ್ಥಾನಕ್ಕೆ ಅದಲು ಬದಲು ಮಾಡೋಕೆ ಆಗೊಲ್ಲ. ತನಿಖೆಯಲ್ಲಿ ಯಾರ ಕೈವಾಡ ಇದೆ ಎಂದು ಚಾರ್ಜ್ ಶೀಟ್‌ನಲ್ಲಿ ನಮೂದು ಆಗುತ್ತದೆ.

ಕಲಾವಿದ ಹಾಗೂ ಸ್ವೇಹಿತನಾಗಿ ಸ್ವಲ ಮಟ್ಟಿಗೆ ಮಾತ್ರ ನನಗೆ ದರ್ಶನ್ ಗೊತ್ತು ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ತನಿಖೆ ಆಗಬೇಕು, ಆರೋಪಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಹಿಡಿದು ಹಾಕಬೇಕು. ಈಗ ಬ್ಯಾನ್ ಮಾಡುವುದರಿಂದ ಪ್ರಯೋಜನವಿಲ್ಲ. ಈಗವರು ಜೈಲಿನಲ್ಲಿದ್ದಾರೆ. ದರ್ಶನ್ ಈಗ ಆರೋಪಿ. ಕೇಸಿನಲ್ಲಿ ತನಿಖೆಯಲ್ಲಿ ಯಾರ್ಯಾರ ಕೈವಾಡವಿದೆ ಎಂಬುದು ಬೆಳಕಿಗೆ ಬರುತ್ತದೆ. ಎಫ್‍ಐಆರ್ ಪ್ರಕಾರ ತನಿಖೆ ನಡೆಯುತ್ತದೆ ಎಂದು ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *