ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು ಒಂದು ವರ್ಷದ ಒಳಾಂಗಣ ವಿನ್ಯಾಸದ ಡಿಪ್ಲೊಮಾ ತರಗತಿಗಳನ್ನು ಗೃಹಿಣಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಮಹಿಳಾ ಮತ್ತು ಪುರುಷರಿಗೆ ಬರುವ ೧೧ನೇ ಜೂನ್ ೨೦೨೪ ರಿಂದ ಆರಂಭಿಸಲಾಗುವುದು. ಈ ತರಗತಿಗಳನ್ನು ಮಧ್ಯಾಹ್ನ ೩.೦೦ ಗಂಟೆಯಿAದ ೫.೦೦ ಗಂಟೆಯವರೆಗೂ ನಿಗದಿತ ಸೀಟುಗಳಲ್ಲಿ ನುರಿತ ಹಾಗೂ ಪರಿಣತಿ ಹೊಂದಿರುವ ಅಧ್ಯಾಪಕರಿಂದ ತರಗತಿಗಳನ್ನು ನಡೆಸಲಾಗುವುದು.

ಒಳಾಂಗಣ ವಿನ್ಯಾಸದ ಈ ತರಗತಿಗಳಲ್ಲಿ ಪಠ್ಯಕ್ರಮಗಳು ಹಾಗೂ ಚುಟುವಟಿಕೆಗಳು ತುಂಬಾ ಆಕರ್ಷಕವಾಗಿದ್ದು ಪ್ರತಿ ವಿದ್ಯಾರ್ಥಿಯನ್ನು ಹುರುದುಂಬಿಸಿ ಒಳಾಂಗಣ ವಿನ್ಯಾಸದಲ್ಲಿ ಸ್ವತಂತ್ರವಾಗಿ ಪ್ರತಿಭೆಯನ್ನು ತೋರಲು ಅವಕಾಶವನ್ನು ಕಲ್ಪಿಸಿಕೊಡಲಾಗುವುದು.
ಈ ತರಗತಿಗಳಲ್ಲಿ ವಿಷಯಗಳೇನೆಂದರೆ ವಸ್ತು, ಬಣ್ಣಗಳು, ಮರಗೆಲಸ, ನೆಲವಿನ್ಯಾಸ, ದೀಪಾಲಂಕಾರ, ಹವಾನಿಯಂತ್ರಣ, ಕೊಳಾಯಿ ಮತ್ತು ಒಳಚರಂಡಿ, ಅನ್ನತ ಒಳಮಾಳಿಗೆ, ಮಳೆ ನೀರಿನ ಸಂಗ್ರಹಣೆ, ಸೋಲಾರ್ಪವರ್ ಸಿಸ್ಟಮ್ನ ಉಪಯುಕ್ತತತೆ, ಸಂರಕ್ಷಣೆ ಸ್ಥಳಗಳ ಭೇಟಿ, ಅಧ್ಯಯನ, ಪ್ರಾಯೋಗಿಕ ತರಗತಿ, ಉಪಯೋಗಿಸುವ ಸಾಮಗ್ರಿಗಳ ಸಮಾವೇಶ ಇವೆಲ್ಲವೂ ಈ ತರಗತಿಯ ಅವಿಭಾಜ್ಯ ಅಂಗವಾಗಿದೆ.
ಸAಸ್ಥೆಯು ಉದ್ಯೋಗ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವುದಲ್ಲದೆ, ತಮ್ಮ ವಿದ್ಯಾರ್ಥಿಗಳಿಗೆ ಒಳಾಂಗಣ ವಿನ್ಯಾಸದಲ್ಲಿನ ವಸ್ತು ಪ್ರದರ್ಶನಗಳನ್ನು ಸಮಾವೇಶಗಳನ್ನು, ಸ್ಪರ್ಧೆಗಳನ್ನು ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುವುದು.
ಪ್ರವೇಶ ಮತ್ತು ಅರ್ಜಿಗಳಿಗಾಗಿ ಸಂಪರ್ಕಿಸಿ : ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು, ೧೮ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-೫೬೦೦೧೨ ಸಂಪರ್ಕಿಸತಕ್ಕದ್ದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು
ಕೊನೆಯ ದಿನಾಂಕ: ೨೮-೦೬-೨೦೨೪
ಹೆಚ್ಚಿನ ವಿವರಗಳಿಗೆ ದೂರವಾಣಿ : 9035336060/9448850502/9035335050 ಸಂಪರ್ಕಿಸಲು ಕೋರಲಾಗಿದೆ.
ವೆಬ್ ಸೈಟ್ : www.mysoreinteriors.co.in