ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ಮಂದಿರಕ್ಕೆ ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಭೇಟಿ ನೀಡಿ ಆತ್ಮಲಿಂಗದ ದರ್ಶನ ಮಾಡಿದ್ದಾರೆ.

ಕುಟುಂಬಸಮೇತರಾಗಿ ಆಗಮಿಸಿದ ಅವರು ಮೊದಲು ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಮಹಾಬಲೇಶ್ವರ ದೇವಾಲಯಕ್ಕೆ ತೆರಳಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಬಳಿಕ ತಾಮ್ರಗೌರಿ, ಸ್ಮಶಾನಕಾಳಿ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆದರು. ಇದನ್ನೂ ಓದಿ:- ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು- ಮೂವರ ದುರ್ಮರಣ

ರಿಷಬ್ ಕಂಡು ಅಭಿಮಾನಿಗಳು ಸೆಲ್ಫಿಗೆ ಮುಗಿ ಬಿದ್ದಿದ್ದಾರೆ. ಬಳಿಕ, ಹರಿಹರಪುರದ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ದರ್ಶನ ಪಡೆದು ಮಠದ ಆವರಣದ ಆಂಜನೇಯನ ಬಳಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ನಂತರ ದೇವಸ್ಥಾನ ಮಂಡಳಿಯವರು ರಿಷಬ್ ಶೆಟ್ಟಿ ಅವರಿಗೆ ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಿದ್ದಾರೆ.
ಇದನ್ನೂ ಓದಿ:- ಉತ್ತರಕಾಶಿ ಟ್ರೆಕ್ಕಿಂಗ್ ದುರಂತ – ಸಾವು ಗೆದ್ದ ಕನ್ನಡಿಗರು ಮರಳಿ ಬೆಂಗಳೂರಿಗೆ