ಬಿಎಸ್‌ವೈ ಆಪ್ತ ಬಿಜೆಪಿ ಮುಖಂಡ ಸಿದ್ದಲಿಂಗಸ್ವಾಮಿ ನಿಧನ

ಬಿಜೆಪಿ ಮುಖಂಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾ.ಪು ಸಿದ್ದಲಿಂಗಸ್ವಾಮಿ ನಿಧನರಾಗಿದ್ದಾರೆ. ಆರೇಳು ತಿಂಗಳಿನಿಂದ ಕಾಪು  ಸಿದ್ದಲಿಂಗಸ್ವಾಮಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಿಸದೇ ಕಾಪು ಸಿದ್ದಲಿಂಗಸ್ವಾಮಿ ಮೃತಪಟ್ಟಿದ್ದಾರೆ. 2013ರಲ್ಲಿ ವರುಣದಲ್ಲಿ ಕಾಪು ಸಿದ್ದಲಿಂಗಸ್ವಾಮಿ ಅವರು ಕೆಜೆಪಿ ಅಭ್ಯರ್ಥಿಯಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೊಡೆ ತಟ್ಟಿದ್ದರು.

ಆದರೆ ಕೆಲವೇ ಸಾವಿರ ಮತಗಳ ಅಂತರದಿಂದ ಸಿದ್ದರಾಮಯ್ಯ ಅವರ ವಿರುದ್ಧ ಸೋಲುಂಡಿದ್ದರು. ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭ ಸಿದ್ದಲಿಂಗಸ್ವಾಮಿ ಕರ್ನಾಟಕ ಪ್ರವಾಸೋಧ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಂಜೆ 4 ಗಂಟೆಗೆ ಸ್ವಗ್ರಾಮ ಕಾರ್ಯದಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿವೆ.‌ ಇತ್ತೀಚೆಗೆ ಯಡಿಯೂರಪ್ಪ ಹಾಗೂ ನೂತನ ಸಂಸದ ವಿ.ಸೋಮಣ್ಣ ಮೈಸೂರಿಗೆ ಬಂದು ಅವರ ಆರೋಗ್ಯ ವಿಚಾರಿಸಿದ್ದರು.

Leave a Reply

Your email address will not be published. Required fields are marked *