ಒಂದೇ ವಿಮಾನದಲ್ಲಿ ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌ ದೆಹಲಿಗೆ ಪ್ರಯಾಣ

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಒಂದು ದಿನದ ಬೆನ್ನಲ್ಲೇ ಎನ್‌ಡಿಎ ಮತ್ತು ಇಂಡಿ ಒಕ್ಕೂಟ ಇಂದು ಮಹತ್ವದ ಸಭೆಗಳನ್ನು ನಡೆಸಲಿವೆ. ಈ ಸಭೆಯಲ್ಲಿ ಹಾಜರಾಗಲು ಈಗಾಗಲೇ ಪ್ರಮುಖ ನಾಯಕ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮತ್ತು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಇಬ್ಬರು ದೆಹಲಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ವಿಮಾನದಲ್ಲಿ ನಿತೀಶ್‌ ಕುಮಾರ್‌ ಮುಂದುಗಡೆ ಸೀಟ್‌ ಕುಳಿತುಕೊಂಡಿದ್ದರೆ ಹಿಂದುಗಡೆ ತೇಜಸ್ವಿ ಯಾದವ್‌ ಆಸೀನರಾಗಿದ್ದಾರೆ. 

ಎನ್‌ಡಿಎ 293, ಇಂಡಿಯಾ 232 ಮತ್ತು ಇತರರು 18 ಸ್ಥಾನಗಳನ್ನು ಗೆದ್ದಿದ್ದಾರೆ. ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು. ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಎಲ್‌ಜಿಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ದೆಹಲಿಗೆ ಪಯಣ ಬೆಳೆಸಿದ್ದಾರೆ. ನಿತೀಶ್‌ ಕುಮಾರ್‌ ಮತ್ತು ತೇಜಸ್ವಿ ಯಾದವ್‌ ಪರಸ್ಪರ ವಿರೋಧಿಗಳು. ವಿಮಾನದಲ್ಲಿ ನಿತೀಶ್‌ ಕುಮಾರ್‌ ಮುಂದುಗಡೆ ಸೀಟ್‌ ಕುಳಿತುಕೊಂಡಿದ್ದರೆ ಹಿಂದುಗಡೆ ತೇಜಸ್ವಿ ಯಾದವ್‌ ಆಸೀನರಾಗಿದ್ದಾರೆ. ಇಬ್ಬರು ನಾಯಕರು ವಿಮಾನದಲ್ಲಿ ಮಾತನಾಡಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.

ಇದನ್ನೂ ಓದಿ: – ದೆಹಲಿ ಕಡೆಗೆ ಹೆಚ್‌ಡಿಕೆ ಪಯಣ

Leave a Reply

Your email address will not be published. Required fields are marked *