ಕೋಝಿಕ್ಕೋಡ್ ನಿಂದ ಬಹ್ರೇನ್ ಗೆ ತೆರಳುತ್ತಿದ್ದ AIR INDIA ಎಕ್ಸ್‌ಪ್ರೆಸ್ ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಆರೋಪದ ಮೇಲೆ 25 ವರ್ಷದ ಯುವಕನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(CSMIA) ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ಆರೋಪಿ, ಕೇರಳದ ಅಬ್ದುಲ್ ಮುಸಾವಿರ್ ನಡುಕಂಡಿಯನ್ನು ಬಂಧಿಸಲಾಗಿದೆ. ಕೋಝಿಕ್ಕೋಡ್‌ನಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ಎಚ್ಚರಗೊಂಡ ಮುಸಾವಿರ್, ತಕ್ಷಣವೇ ವಿಮಾನದ ಹಿಂಭಾಗಕ್ಕೆ ತೆರಳಿ ಅಲ್ಲಿ ಕ್ಯಾಬಿನ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 336 (ಜೀವಕ್ಕೆ ಹಾನಿ ಉಂಟುಮಾಡುವ ಬೆದರಿಕೆ), 504 (ಶಾಂತಿ ಭಂಗಕ್ಕೆ ಯತ್ನ), 506 (ಬೆದರಿಕೆ) ಮತ್ತು 323 (ಹಲ್ಲೆ) ಮತ್ತು ವಿಮಾನದ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :- ಟಿಕೆಟ್ ಕ್ಯಾನ್ಸಲ್‌ನಿಂದ ರೈಲ್ವೇಗೆ 6,112 ಕೋಟಿ ರೂ. ಗಳಿಕೆ