ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ಹಲ್ಲೆ

ಸ್ಯಾಂಡಲ್‌ ವುಡ್‌ ನಟ ದೃವ ಸರ್ಜಾ ಅವರ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ನಡು ರಸ್ತೆಯಲ್ಲಿ ಬೈಕ್ ಸವಾರರು ಗಂಭೀರವಾಗಿ ಹಲ್ಲೆ ಮಾಡಿ ಹೋಗಿರುವ ಘಟನೆ ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ಬೈಕ್‌ ನಲ್ಲಿ ಬಂದು ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಸದ್ಯ ಹಲ್ಲೆ ಮಾಡಿದವರು ಯಾರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಯಾಕಾಗಿ ಹಲ್ಲೆ ನಡೆದಿದೆ ಎನ್ನುವ ಬಗ್ಗೆಯೂ ಸ್ಪಷ್ಟವಾದ ಮಾಹಿತಿಯಿಲ್ಲ. ಹಲ್ಲೆ ಬಗ್ಗೆ ಬನಶಂಕರಿ ಪೊಲೀಸರಿಗೆ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಶಾಂತ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : – ಬೆಳಗಾವಿಯಲ್ಲಿ ಸಂಪ್ ಗೆ ಬಿದ್ದು 2 ವರ್ಷದ ಮಗು ಸಾವು  

Leave a Reply

Your email address will not be published. Required fields are marked *