ರಾಜ್ಯದಲ್ಲಿ ರಸ್ತೆ ಅಪಘಾತಕ್ಕೆ 51 ಬಲಿ – ಸುರಕ್ಷಿತ ವಾಹನ ಚಾಲನೆಗೆ ಅಲೋಕ್ ಕುಮಾರ್ ವಿನಂತಿ

ಮೇ 26 ರಂದು ರಾಜ್ಯದಲ್ಲಿ ಒಂದೇ ದಿನ 51 ಜನ ಅಪಘಾತಕ್ಕೆ ಬಲಿಯಾಗಿದ್ದು, ಈ ಬಗ್ಗೆ ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ADGP ಅಲೋಕ್ ಕುಮಾರ್ ತೀವ್ರ ಕಳವಳಗೊಂಡಿದ್ದಾರೆ. ವೇಗ ಹಾಗೂ ‌ಅಜಾಗರೂಕತೆಯ ವಾಹನ ಚಾಲನೆ ಅಪಾಯಕಾರಿ ಎಂಬ ಅರಿವಿದ್ದರೂ ನಿರ್ಲಕ್ಷ್ಯದಿಂದಾಗಿ ಇತ್ತೀಚೆಗೆ ಅಪಘಾತ, ಸಾವು-ನೋವು ಪ್ರಕರಣಗಳು ಹೆಚ್ಚುತ್ತಿದೆ. 

ಕಳೆದ 24 ಗಂಟೆ ರಸ್ತೆ ಅಪಘಾತಗಳಲ್ಲಿ 51 ಜೀವಗಳು ಸಾವನ್ನಪ್ಪಿವೆ. ಇದು ಇತ್ತೀಚೆಗೆ ಸಂಭವಿಸಿದ ಅತೀ ಹೆಚ್ಚಿನ ಸಾವುನೋವಿನ ಪ್ರಕರಣವಾಗಿದೆ. ಇವುಗಳಲ್ಲಿ ಹೆಚ್ಚಿನವು ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿವೆ. ರಸ್ತೆ ಸುರಕ್ಷತೆಗೆ ಎಲ್ಲರೂ ಜವಾಬ್ದಾರಿಯುತ ನಡವಳಿಕೆ ತೋರಬೇಕು. ಸಂಚಾರಿ ನಿಯಮಗಳ ಉಲ್ಲಂಘನೆಯೇ ಅಪಘಾತಕ್ಕೆ ಕಾರಣವಾಗಿದೆ ದಯವಿಟ್ಟು ಸಂಚಾರಿ ನಿಯಮ ಪಾಲಿಸಿ ಎಂದು ರ್ಸಾರ್ವಜನಿಕರಿಗೆ ಮನವಿ ಮಾಡಿದರು. ಚಿಕ್ಕೋಡಿ, ಹಾಸನ, ಉತ್ತರ ಕನ್ನಡ ಹಾಗೂ ರಾಮನಗರ ಸೇರಿ ರಾಜ್ಯದ ಹಲವೆಡೆ ಭೀಕರ ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : – ದಶಕಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌

Leave a Reply

Your email address will not be published. Required fields are marked *