ಮೈಸೂರಿನ ಶ್ರೀ ಚಿದಂಬರೇಶ್ವರ ಸ್ವಾಮಿ ಮತ್ತು ಶ್ರೀ ಆನಂದವಲ್ಲಿ ದೇವಸ್ಥಾನದಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ

ಮೈಸೂರು : ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ಸಮಾಜದಲ್ಲಿನ ಹಿಂದೂಗಳಿಗೆ ಧರ್ಮಜಾಗೃತಿ ಮತ್ತು ಧರ್ಮಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದಿದೆ.

ಹಾಗೆಯೇ ಅದರ ಒಂದು ಭಾಗವಾಗಿ ಮೈಸೂರಿನ ಶ್ರೀ ಚಿದಂಬರೇಶ್ವರ ಸ್ವಾಮಿ ಮತ್ತು ಶ್ರೀ ಆನಂದವಲ್ಲಿ ದೇವಸ್ಥಾನದಲ್ಲಿ ಧರ್ಮಶಿಕ್ಷಣ ವರ್ಗವನ್ನು ಪ್ರಾರಂಭಿಸಿ ಅಲ್ಲಿಯ ಸ್ಥಳೀಯ ಧರ್ಮಪ್ರೆಮಿಗಳಿಗೆ ದೇವಸ್ಥಾನದ ಮಹತ್ವ, ದೇವಸ್ಥಾನದ ಪಾವಿತ್ರ್ಯವನ್ನು ಉಳಿಸುವಲ್ಲಿ ನಮ್ಮೆಲ್ಲರ ಪಾತ್ರ ಹಾಗೂ ದೇವಸ್ಥಾನಕ್ಕೆ ಹೋಗುವಾಗ ನಾವೆಲ್ಲರೂ ಯಾವ ಭಾವವನ್ನು ಇಟ್ಟುಕೊಂಡು ಹೋಗಬೇಕು, ಹಾಗೆಯೇ ದೇವಸ್ಥಾನದ ದರ್ಶನವನ್ನು ಯೋಗ್ಯ ರೀತಿಯಲ್ಲಿ ಹೇಗೆ ಪಡೆಯಬೇಕು, ಈ ಎಲ್ಲಾ ವಿಷಯದ ಕುರಿತು ಮಾಹಿತಿ ಮತ್ತು ಸಾಮೂಹಿಕವಾಗಿ ದೇವರ ನಾಮಜಪವನ್ನು ಮಾಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಲ್ಲಿಯ ಸ್ಥಳೀಯರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಮತ್ತು ಮೈಸೂರು ಜಿಲ್ಲಾ ಸಮನ್ವಯಕರಾದ ಶ್ರೀ. ಶರತ್ ಕುಮಾರ್ ಇವರು ಉಪಸ್ಥಿತರಿದ್ದರು.

ಇತಿ ತಮ್ಮ ವಿಶ್ವಾಸಿ,

ಶ್ರೀ. ಮೋಹನ್ ಗೌಡ,

ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಸಂಪರ್ಕ : 7204082609

Leave a Reply

Your email address will not be published. Required fields are marked *