ಹಿಮಾಚಲ ಪ್ರದೇಶ, ಮಂಡಿ ಜನರು ನನ್ನನ್ನು ಹಾರೈಸುತ್ತಾರೆ – ಕಂಗನಾ ರಣಾವತ್

ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಸರದಿ ಸಾಲಿನಲ್ಲಿ ನಿಂತು ನಟಿ ವೋಟ್ ಮಾಡಿದ್ದಾರೆ. ಜನಸಾಮಾನ್ಯರ ಜೊತೆ ಸಾಲಿನಲ್ಲಿ ನಿಂತು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಕಂಗನಾ ವೋಟ್ ಮಾಡಿದ್ದಾರೆ.

ಮತದಾನದ ಬಳಿಕ ಪ್ರತಿಕ್ರಿಯೆ ನೀಡಿದ ಅವರು ನಾನು ಇದೀಗ ನನ್ನ ಮತವನ್ನು ಚಲಾಯಿಸಿದ್ದೇನೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಮತದಾನದ ಹಕ್ಕನ್ನು ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಹಿಮಾಚಲ ಪ್ರದೇಶ, ಮಂಡಿ ಜನರು ನನ್ನನ್ನು ಹಾರೈಸುತ್ತಾರೆ ಎಂಬ ನಂಬಿಕೆಯಿದೆ. ರಾಜ್ಯದ ಎಲ್ಲಾ 4 ಸ್ಥಾನಗಳನ್ನು ನಾವು ಪಡೆಯುತ್ತೇವೆ ಎಂಬ ಭರವಸೆ ನನಗಿದೆ ಎಂದು ಕಂಗನಾ ರಣಾವತ್ ತಿಳಿಸಿದ್ದಾರೆ.

ಇದನ್ನೂ ಓದಿ : – ನಾವು ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ – ಡಿಕೆಶಿ

Leave a Reply

Your email address will not be published. Required fields are marked *