ನಾಳೆ ೭ನೇ ಹಂತದ ಮತದಾನ: ಮೋದಿ ಸೇರಿ ಹಲವರ ಭವಿಷ್ಯ ನಿರ್ಧಾರ

ನವದೆಹಲಿ- ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ೫೭ ಲೋಕಸಭಾ ಕ್ಷೇತ್ರಗಳಿಗೆ ನಾಳೆ ಬಿಗಿಭದ್ರತೆಯಲ್ಲಿ ನಡೆಯಲಿದೆ. ಈ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪಕ್ಷಗಳ ಘಟಾನುಘಟಿ ನಾಯಕರು ಕಣದಲ್ಲಿದ್ದಾರೆ.ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ ಬಾಲಿವುಡ್ ನಟಿ ಕಂಗನಾ ರನೌತ್ ಮಂಡಿ ಕ್ಷೇತ್ರದಿಂದ ಅನುರಾಗ್ ಸಿಂಗ್ ಠಾಕೂರ್ ಹಮೀರ್‍ಪುರ ಕ್ಷೇತ್ರದಿಂದ ಮತ್ತು ನಟ ರವಿ ಕಿಶನ್ ಗೋರಖ್‌ಪುರ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ.ಜೊತೆಗೆ ಹಲವು ಹಳಬ ಮತ್ತು ಹೊಸ ಮುಖಗಳು ಅಧೃಷ್ಠ ಪರೀಕ್ಷೆಗ ಮುಂದಾಗಿದ್ಧಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಡೈಮಂಡ್ ಹಾರ್ಬರ್‌ನಿಂದ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ ಹೀಗಾಗಿ ೭ ನೇ ಹಂತದ ಚುನಾವಣೆ ಹಲವು ಘಟಾನು ಘಟಿ ನಾಯಕರ ಅದೃಷ್ಠ ಪರೀಕ್ಷೆಗೆ ವೇದಿಕೆಯಾಗಿದೆ.ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಆಯ್ಕೆ ಬಯಸಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲ್ಲಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನ ಅಜಯ್ ರೈ ಕಣದಲ್ಲಿದ್ದಾರೆ. ಉಳಿದಂತೆ ಬಿಜೆಪಿ, ಮಿತ್ರಪಕ್ಷಗಳಾದ ಅಪ್ನಾ ದಳ (ಎಸ್), ಎಸ್‌ಬಿಎಸ್‌ಪಿ, ನಿಶಾದ್ ಪಕ್ಷ, ವಿರೋಧ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ ಸೇರಿದಂತೆ ಹಲವು ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಇಂದು ಮನೆ ಮನೆಗೆ ತೆರಳಿ ಮತಯಾಚಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರು ಕೊನೆ ಸುತ್ತಿನ ಮತಯಾಚನೆಯಲ್ಲಿ ನಿರತರಾಗಿದ್ದಾರೆ.ಈಗಾಗಲೇ ದೇಶದಲ್ಲಿ ೬ ಹಂತದಲ್ಲಿ ಮತದಾನ ಪೂರ್ಣಗೊಂಡಿದ್ದು ಎಲ್ಲರ ಚಿತ್ತ ನಾಳೆ ನಡೆಯಲಿರುವ ೭ ನೇ ಹಾಗು ಕಡೆಯ ಹಂತದ ಮತದಾನದತ್ತ ಕೇಂದ್ರೀಕೃತವಾಗಿದೆ.

Leave a Reply

Your email address will not be published. Required fields are marked *