ಅರಣ್ಯ ಇಲಾಖೆಯಿಂದ 47 ಸಾವಿರ ಸಸಿ ವಿತರಣೆ

ಇಂಡಿ : :ತಾಲೂಕಿನ ಬಬಲಾದ ಸಸ್ಯಕ್ಷೇತ್ರದಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ 47 ಸಾವಿರ ಸಸಿಗಳನ್ನು ವಿತರಿಸಲಾಗುವದೆಂದು ವಲಯ ಅರಣ್ಯ ಆಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.
ಪಟ್ಟಣದ ಸಾಮಾಜಿಕ ಅರಣ್ಯ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು ಜೂ.3 ರಿಂದ ರೈತರಿಗೆ, ಸಂಘಸಂಸ್ಥೆಗಳಿಗೆ,ಶಾಲಾ ಕಾಲೇಜುಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ಸಸಿಗಳನ್ನು ವಿತರಿಸಲಾಗುವದು.
ಸಸಿಗಳು 69 ಮತ್ತು 8 12 ಬ್ಯಾಗ್ ಸೈಜ್ ನಲ್ಲಿ ವಿತರಿಸಲಾಗುವದು. 69 ಬ್ಯಾಗ ಸೈಜ್ ಗೆ ದರ ರೂ 3 ರೂ ಮತ್ತು 812 ಬ್ಯಾಗ ಸೈಜ್ ಗೆ ದರ ರೂ 6 ರೂ ನಿಗದಿಪಡಿಸಲಾಗಿದೆ ಎಂದರು.

ನುಗ್ಗೆ, ಸಾಗವಾನಿ, ಮಹಾಗನಿ, ತಪಸಿ, ಹುಣಸೆ, ಸಸಿಗಳು 69 ಬ್ಯಾಗ ಸೈಜಿನಲ್ಲಿ ಮತ್ತು ಮಹಾಗನಿ, ಸಾಗವಾನಿ, ಹುಣಸೆ, ಬದಾಮ, ಮೆಹಂದಿ, ಶ್ರೀಗಂಧ, ರಕ್ತ ಚಂದನ, ಬಾರೆ, ಪೆರು, ನಿಂಬೆ, ನುಗ್ಗೆ 812 ಬ್ಯಾಗ ಸೈಜ್ ನಲ್ಲಿ ದೊರೆಯುತ್ತವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೋರ್ತಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಲ್.ಜಿ.ನಾದ, ಗಸ್ತು ವನ ಪಾಲಕ ಡಿ.ಎ.ಮುಜಗೊಂಡ, ಇಂಡಿ ಉಪ ವಲಯ ಅರಣ್ಯಾಧಿಕಾರಿ ರಾಜೇಂದ್ರ ಹುನ್ನುರ, ನಾಗೇಶ ಬಿರಾದಾರ, ಕಲ್ಲಪ್ಪ ಹರಿಜನ ಮತ್ತಿತರಿದ್ದರು.

Leave a Reply

Your email address will not be published. Required fields are marked *