ಮಳೆ.. ಮಳೆ.. ಕರ್ನಾಟಕದ ನದಿಗಳಿಗೆ ಮತ್ತೆ ಜೀವಕಳೆ!

ಮಳೆ.. ಮಳೆ.. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಮಳೆ ಹೀಗೆ, ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಾರಣ ಕರ್ನಾಟಕದಲ್ಲಿ ರೈತರು ನೆಮ್ಮದಿಯ ನಿಟ್ಟುಸಿರನ್ನ ಬಿಟ್ಟಿದ್ದಾರೆ. ಇದು ಮಾತ್ರವಲ್ಲ ಕರ್ನಾಟಕದ ನದಿಗಳಿಗೆ ಕೂಡ ಮತ್ತೆ ಜೀವಕಳೆ ಬಂದಿದೆ. ಅದರಲ್ಲೂ ಇನ್ನೇನು ಸಂಪೂರ್ಣವಾಗಿ ಒಣಗಿ ಹೋಗಿದ್ದ ಕರಾವಳಿ & ಮಲೆನಾಡ ಭಾಗದ ನದಿಗಳು ಈಗ ಹೇಗಾಗಿವೆ ಗೊತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ. ಕಳೆದ 2 ವಾರದಿಂದ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಮಳೆಯಾಗುತ್ತಿದೆ. ಈ ಪೈಕಿ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು & ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆ ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಿಗೆ ಭರ್ಜರಿ ಮಳೆ ಬಂದಿದೆ. ಹೀಗಾಗಿ ಕರ್ನಾಟಕದ ನದಿಗಳು ತುಂಬಲು ಆರಂಭ ಆಗಿವೆ. ಹಾಗಾದ್ರೆ ಯಾವೆಲ್ಲಾ ನದಿಗಳು ತುಂಬುತ್ತಿವೆ ಮುಂದೆ ಓದಿ.

ಕೆಲವೇ ದಿನಗಳ ಹಿಂದೆ ಕರ್ನಾಟಕದ ಪರಿಸ್ಥಿತಿ ಕೈಮೀರಿ ಹೋಗಿ, ಸರ್ಕಾರ ಪರಿತಪಿಸಿತ್ತು. ನದಿಗಳು ಬತ್ತಿ ಹೋಗಿದ್ದವು, ಕರ್ನಾಟಕದ ಮಲೆನಾಡು ಭಾಗದಲ್ಲೂ ನೀರು ಸಿಗುತ್ತಿರಲಿಲ್ಲ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೆಕ ಜಿಲ್ಲೆಗಳಿಗೆ ಕಳೆದ 4 ತಿಂಗಳಿಂದ ಕುಡಿಯೋಕೂ ನೀರು ಸಿಗದಂತಾಗಿತ್ತು. ಯಾಕಂದ್ರೆ ಕರ್ನಾಟಕದಲ್ಲಿ ನೀರು ಪೂರೈಸುವ ಜಲಾಶಯ ಒಣಗುತ್ತಾ ಬಂದವು. ಹಾಗೇ ಅಂತರ್ಜಲ ಕೂಡ ಕುಸಿದು ಹೋಗಿ, ಬೇಸಿಗೆ ಆರಂಭ ಆಗುತ್ತಿದ್ದಂತೆ ಜನಗಳಿಗೆ ನೀರು ಸಿಗದೆ ಸಾವಿರಾರು ರೂಪಾಯಿ ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿದ್ದರು. ಯಾವೆಲ್ಲಾ ನದಿಗಳು ತುಂಬುತ್ತಿವೆ? ಆದರೆ ಈಗ ಮಳೆ ಆರಂಭ ಆರಂಭವಾದ ಹಿನ್ನೆಲೆ ಕಾವೇರಿ, ತುಂಗಾ, ಭದ್ರಾ, ಹೇಮಾವತಿ ನದಿಗಳೂ ಸೇರಿದಂತೆ ಕಪಿಲಾ, ನೇತ್ರಾವತಿ ಸೇರಿದಂತೆ ಹತ್ತಾರು ನದಿಗಳು ಈಗ ನಿಧಾನವಾಗಿ ತುಂಬಿಕೊಳ್ಳುತ್ತಿವೆ. ಅದರಲ್ಲೂ ಮಲೆನಾಡು ಭಾಗದಲ್ಲಿನ ನದಿಗಳಿಗೆ ಜೀವಕಳೆ ಬರುತ್ತಿದ್ದು, ಈ ಹಿನ್ನೆಲೆ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಭರ್ಜರಿ ಮಳೆ ಆರಂಭವಾಗಿದ್ದು ಜನರಿಗೆ ಮಾತ್ರ ಅಲ್ಲ ಕಾಡಲ್ಲಿ ಇರುವ ಪ್ರಾಣಿಗಳಿಗೂ ಖುಷಿ ಆಗಿದೆ. ಯಾಕಂದ್ರೆ ನೀರು ಇಲ್ಲದೆ ಕರ್ನಾಟಕದಲ್ಲಿ ಕಾಡು ಪ್ರಾಣಿಗಳಿಗೆ ಕೂಡ ಸಾಕಷ್ಟು ಸಮಸ್ಯೆ ಆಗಿತ್ತು.

Leave a Reply

Your email address will not be published. Required fields are marked *