310 ಅರಣ್ಯ ವೀಕ್ಷಕ ಹುದ್ದೆಗೆ 1.94 ಲಕ್ಷ ಮಂದಿ ಆಕಾಂಕ್ಷಿಗಳು

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 310 ಅರಣ್ಯ ವೀಕ್ಷಕರ ಹುದ್ದೆಗಳಿಗೆ 1,94,007 ಅರ್ಜಿಗಳು ಬಂದಿವೆ ಎಂದು ತಿಳಿದುಬಂದಿದೆ.

10ನೇ ತರಗತಿ ಉತ್ತೀರ್ಣರಾದ ಎಲ್ಲರೂ ಹುದ್ದೆಗೆ ಅರ್ಜಿ ಸಲ್ಲಿಸಬಹುದು ನಂತರ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದಿವಾಸಿಗಳು ಮತ್ತು ಅರಣ್ಯವಾಸಿಗಳನ್ನು ನೇಮಿಸಿಕೊಳ್ಳಲು ರಚಿಸಲಾದ ಹುದ್ದೆಗಳ ಸಂಖ್ಯೆ ಕಡಿಮೆಯಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಆಯ್ಕೆಯಾದ 267 ಅಭ್ಯರ್ಥಿಗಳಿಗೆ ಮಂಗಳವಾರ ಸಿಎಂ ಸಿದ್ದರಾಮಯ್ಯ ನೇಮಕಾತಿ ಪತ್ರ ವಿತರಿಸಲಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

2022-23ರಲ್ಲಿ ಕೊನೆಯ ಬಾರಿಗೆ ನೇಮಕಾತಿ ನಡೆದಿತ್ತು. ಇದೀಗ ಪರೀಕ್ಷೆ ನಡೆಸಲಾಗುತ್ತಿದ್ದು, ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು ಮತ್ತು ಚಿಕ್ಕಮಗಳೂರಿನಿಂದ ಕಡಿಮೆ ಅರ್ಜಿಗಳು ಬಂದಿವೆ. ಆಯ್ಕೆ ವೇಳೆ ಮಾನದಂಡಗಳನ್ನು ತೀವ್ರಗೊಳಿಸಲಾಗಿದೆ. ಹೀಗಾಗಿ ಹಲವು ಅರ್ಜಿಗಳು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲ್ಪಡುತ್ತವೆ. ಈ ಸೇವೆಗಳು ಖಾಯಂ ಹುದ್ದೆಗಳಾಗಿರುವುದರಿಂದ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಸಾಧ್ಯವಾಗುವುದಿಲ್ಲ. ಹೀಗಾಗಿ ಅರ್ಜಿಗಳು ಹೆಚ್ಟಿನ ಸಂಖ್ಯೆಯಲ್ಲಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *