ನಿಪ್ಪಾಣಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಬೆಳಗಾವಿ : ನಿಪ್ಪಾಣಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಜಯಭೇರಿ ಬಾರಿಸಿದೆ. ಬಿಜೆಪಿ ಸದಸ್ಯೆ ಸೋನಲ್ ರಾಜೇಶ ಕೊಠಿಯಾ ಅಧ್ಯಕ್ಷರಾಗಿ ಮತ್ತು ಸಂತೋಷ ಸಾಂಗಾವಕರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೋನಲ್ ರಾಜೇಶ ಕೊಠಿಯಾ ಅವರು 17 ಮತ ಪಡೆದು ರಾಷ್ಟ್ರೀಯವಾದಿ ಶರದ್‌ ಪವಾರ್ ಗುಂಪಿನ ಅಭ್ಯರ್ಥಿ ಅನಿತಾ ಪಠಾಡೆ ಅವರನ್ನು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂತೋಷ ಸಾಂಗಾವಕರ ಅವರು ಸರ್ಫ್ರಾಜ್ ಬಡೇಘರ ಅವರನ್ನು ಸೋಲಿಸಿದರು. ಇಬ್ಬರು ಕಾಂಗ್ರೆಸ್ ಮತ್ತು ಒಬ್ಬ ಸ್ವತಂತ್ರ ಸದಸ್ಯರು ಬೆಂಬಲ ನೀಡಿದ್ದರಿಂದ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಈ ಮೂಲಕ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ತಮ್ಮ ಪ್ರಾಬಲ್ಯ ಉಳಿಸಿಕೊಂಡಂತಾಗಿದೆ.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *