ರಂಜನಿ ರಾಘವನ್ ಜೀವನ ಸಂಗಾತಿಯನ್ನು ಪರಿಚಯಿಸಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌

ನ್ನಡತಿ ಸೀರಿಯಲ್ ಖ್ಯಾತಿಯ ರಂಜನಿ ರಾಘವನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೀವನ ಸಂಗಾತಿಯನ್ನು ನಟಿ ಪರಿಚಯಿಸಿದ್ದಾರೆ.

ಮತ್ತೊಬ್ಬ ನಟಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಸಾಗರ್ ಭಾರಧ್ವಜ್ ಎಂಬುವವರ ಜೊತೆ‌ ರಂಜನಿ ರಾಘವನ್ ಎಂಗೇಜ್ ಆಗಿದ್ದಾರೆ. ಜೀವನ ಸಂಗಾತಿ, ನನ್ನ ಹುಡುಗ ಎಂದು ಹ್ಯಾಶ್ ಟ್ಯಾಗ್ ಕೊಟ್ಟು ಫೋಟೋ ಶೇರ್ ಮಾಡಿ ನಟಿ ಸಂಭ್ರಮಿಸಿದ್ದಾರೆ.

ಅಂತೂ ಇಂತೂ ನಟಿ ಬಾಯ್‌ಫ್ರೆಂಡ್ ಪರಿಚಯ ಮಾಡಿಕೊಟ್ಟಿದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇಬ್ಬರಿಗೂ ಶುಭಕೋರುತ್ತಿದ್ದಾರೆ. ಮದುವೆ ಯಾವಾಗ? ಎಂಬ ವಿವರ ಇನ್ನಷ್ಟೇ ರಿವೀಲ್‌ ಆಗಬೇಕಿದೆ.

ಅಂದಹಾಗೆ, ಪುಟ್ಟಗೌರಿ ಮದುವೆ, ಕನ್ನಡತಿ ಸೀರಿಯಲ್, ಕಾಂಗರೂ ಸಿನಿಮಾ, ರಾಜಹಂಸ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *