ಕೋಲ್ಕತ್ತಾ : ಆರ್.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು ನಡೆದ ಅತ್ಯಾಚಾರಕ್ಕೆ ಒಳಗಾದ 31 ವರ್ಷದ ವೈದ್ಯ ವಿದ್ಯಾರ್ಥಿನಿಯ ಹತ್ಯೆಯಾದ ಸ್ಥಳದ ಬಳಿ ನವೀಕರಣ ಕಾರ್ಯ ಕೈಗೊಳ್ಳುವಂತಹ ತುರ್ತು ಇದೆಯೇ ಎಂದು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಪಶ್ಚಿಮ ಬಂಗಾಳವನ್ನು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ ಭಟ್ಟಾಚಾರ್ಯ ನೇತೃತ್ವದ ಪೀಠವು ಅಪರಾಧ ನಡೆದ ಸ್ಥಳದಿಂದ ಸಾಕ್ಷ್ಯವನ್ನು ಅಳಿಸಿಹಾಕಲು ನವೀಕರಣ ಕಾರ್ಯವನ್ನು ನಡೆಸಲಾಗಿದೆ ಎಂಬ ಆರೋಪಗಳಿಗೆ ಉತ್ತರವನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಆರೋಪವನ್ನು ಬಲವಾಗಿ ನಿರಾಕರಿಸಿದ ರಾಜ್ಯ ಸರ್ಕಾರ ಪ್ರತಿನಿಧಿಸಿದ ವಕೀಲರು, “ಪಿಒ (ಸಂಭವಿಸಿದ ಸ್ಥಳ) ಕೆಡವಲಾಗಿದೆ, ನಾಶಪಡಿಸಲಾಗಿದೆ ಎಂಬ ಈ ಎಲ್ಲಾ ಆರೋಪಗಳು ಸತ್ಯವಲ್ಲ, ಕೆಡಹುವ ಕೆಲಸವು ಪಿಒ ಬಳಿ ಇರಲಿಲ್ಲ ಎಂದು ತಿಳಿಸಿದರು.
ವೈದ್ಯರ ವಿಶ್ರಾಂತಿ ಕೊಠಡಿಗಾಗಿ ನವೀಕರಣ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರ ವಕೀಲರು ಹೇಳಿದರು. ಆದಾಗ್ಯೂ, ಈ ಕ್ರಮದ ಸಮಯವನ್ನು ನ್ಯಾಯಾಲಯವು ಪ್ರಶ್ನಿಸಿತು. “ಏನಿದು ಅವಸರ? …ನೀವು ಯಾವುದಾದರೂ ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ಹೋಗಿ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಇದೆಯೇ ಎಂದು ನೋಡಿ! ನಾನು ಇದನ್ನು ಜವಾಬ್ದಾರಿಯಿಂದ ಹೇಳುತ್ತೇನೆ. PWD ಏನು ಮಾಡಿದೆ? … ನಾವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುತ್ತೇವೆ, ಆಸ್ಪತ್ರೆಯನ್ನು ಮುಚ್ಚುವುದೇ ಉತ್ತಮ ಎಂದು ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಖಾರವಾಗಿ ಹೇಳಿದರು.
ಆಗ, ಅಪರಾಧದ ಸ್ಥಳವನ್ನು ಸುರಕ್ಷಿತವಾಗಿರಿಸಲಾಗುವುದು ಎಂದು ಸರ್ಕಾರ ಪ್ರತಿನಿಧಿಸಿದ ವಕೀಲರು ಹೇಳಿದರು. ಅಪರಾಧ ನಡೆದ ಸ್ಥಳದಲ್ಲಿ ಯಾವುದನ್ನೂ ಕಡೆವಲಾಗಿಲ್ಲ ಅವರು ಹೇಳಿದರು. ಹಾಗಾದ್ರೆ ಅಪರಾಧದ ಸ್ಥಳವು ಇನ್ನೂ ಯಥಾಸ್ಥಿತಿಯಲ್ಲಿದೆ ಎಂಬುದನ್ನು ತೋರಿಸಲು ಛಾಯಾಚಿತ್ರಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಲು ಮುಂದಾಯಿತು. ಆಗ ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಅವರು, “ನಾವು ನಿಮ್ಮ ಮಾತನ್ನು ಕೇಳುತ್ತೇವೆ, ಇದು ದಾಖಲೆಯಲ್ಲಿರಲಿ. ಅಫಿಡವಿಟ್ ಸಲ್ಲಿಸಿ. ನೀವು ಛಾಯಾಚಿತ್ರಗಳೊಂದಿಗೆ ರುಜುವಾತು ಮಾಡಬಹುದು. ನಾವು ಮುಕ್ತ ಮನಸ್ಸಿನಿಂದ ಕೇಳುತ್ತೇವೆ” ಎಂದು ಹೇಳಿದರು.
ತನ್ನ ಆದೇಶದಲ್ಲಿ, ಮುಂದಿನ ಮಂಗಳವಾರದೊಳಗೆ (ಆಗಸ್ಟ್ 20) ಪ್ರಕರಣದ ವಿವಿಧ ಅಂಶಗಳ ಕುರಿತು ರಾಜ್ಯದಿಂದ ಉತ್ತರವನ್ನು ಕೋರಿದ ಪೀಠ, ಆಗಸ್ಟ್ 21 ರಂದು ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನಡೆಸಲಿದೆ ಎಂದು ಹೇಳಿದೆ.
ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ