ಪಂಚೆ ಎತ್ತಿಕಟ್ಟಿ ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ಕುಮಾರಸ್ವಾಮಿ…

ಮಂಡ್ಯ : ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ರೈತ ಲಕ್ಷ್ಮಣ ಅವರ ಗದ್ದೆಯಲ್ಲಿ ಸ್ವಲ್ಪಹೊತ್ತು ಭತ್ತದ ನಾಟಿ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಭೂಮಿ ತಾಯಿ ಮಕ್ಕಳಾದ ನಮೆಲ್ಲರಿಗೂ ಭೂಮಿಯೇ ಸರ್ವಸ್ವ. ಬೇಸಾಯವೇ ಬದುಕು. ಭತ್ತದ ನಾಟಿ ನನ್ನ ಮನೆಯ ಕಾರ್ಯಕ್ರಮವೇ ಆಗಿತ್ತು. ರೈತಾಪಿ ಜನರೊಂದಿಗೆ ಇಂತಹ ಸಾರ್ಥಕ, ಅನನ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನನ್ನಲ್ಲಿ ಧನ್ಯತೆಯ ಭಾವ ಉಂಟು ಮಾಡಿದೆ ಎಂದು ಅವರು ಅದರಲ್ಲಿ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದ ಸಮಸ್ತ ಅನ್ನದಾತರಿಗೆ ಹೆಗಲು ಕೊಡುವ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದ್ದಾರೆ.

ಭತ್ತ ನಾಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಆರ್‍ಎಸ್ ಅಣೆಕಟ್ಟು (KRS Dam) ಭರ್ತಿಯಾಗಿದೆ. ಈ ಸಂತಸದ ಸಮಯದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬಲು ನಾಟಿ ಮಾಡಿದ್ದೇನೆ. ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ನಾಟಿ ಮಾಡಿದ್ದೆ. ಈಗ ಕೇಂದ್ರದ ಮಂತ್ರಿ ಆಗಿದ್ದೇನೆ. ರೈತರಿಗೆ ಆತ್ಮಸೈರ್ಯ ತುಂಬಲು ಈ ರೀತಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಬೆಳಿಗ್ಗೆ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭತ್ತದ ಪೈರು ಕಣ ಮತ್ತು ಧಾನ್ಯಗಳ ರಾಶಿಗೂ ಕೂಡ ವಿಶೇಷ ಪೂಜೆ ಸಲ್ಲಿಸಿದರು. ಆ ಬಳಿಕ ಕೃಷಿ ನೂರಾರು ಕಾರ್ಮಿಕ ಮಹಿಳೆಯರೊಂದಿಗೆ ಭತ್ತ ನಾಟಿ ಮಾಡಿ ರೈತರಿಗೆ ಆತ್ಮಸ್ಥೈರ್ಯ ತುಂಬಿದರು. ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು. ಭತ್ತ ನಾಟಿ ಮಾಡಿ ರೈತರ ಬಗ್ಗೆ ಖುಷಿ ಹಂಚಿಕೊಂಡರು.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *