ಮಾಸ್ತಿ ಪಿಯು ಕಾಲೇಜ್ ಲಕ್ಷ್ಮೀನಾರಾಯಣರಿಗೆ ಬೀಳ್ಕೊಡುಗೆ

ಕೋಲಾರ – ಸತತ ೧೨ ವರ್ಷಗಳ ಕಾಲ ಒಂದೇ ಕಾಲೇಜಿನಲ್ಲಿ ಕೆಲಸ ಮಾಡಿ ವಿದ್ಯಾರ್ಥಿಗಳು,ಪೋಷಕರು, ಸಹೋದ್ಯೋಗಿಗಳೊಂದಿಗೆ ಸುಮಧುರ ಬಾಂಧವ್ಯ ಹೊಂದಿ ಇದೀಗ ನಿವೃತ್ತರಾದ ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ, ಪ್ರಥಮ ದರ್ಜೆ ಗುಮಾಸ್ತ ವಿ.ಲಕ್ಷ್ಮೀನಾರಾಯಣ ಅವರನ್ನು ಪೋಷಕರು,ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟರು.
ಜಿಲ್ಲೆಯ ಮಾಸ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೧೨ ವರ್ಷ ಪ್ರಾಂಶುಪಾಲರಾಗಿ ಇದೀಗ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ನಿವೃತ್ತರಾದ ರಾಮಚಂದ್ರಪ್ಪ, ಅದೇ ಕಾಲೇಜಿನಲ್ಲಿ ೧೨ ವರ್ಷ ಗುಮಾಸ್ತರಾಗಿದ್ದ ಲಕ್ಷ್ಮೀನಾರಾಯಣ ಅವರ ಪ್ರಾಮಾಣಿಕ ಸೇವೆ,ಬದ್ದತೆ, ಕರ್ತವ್ಯ ನಿಷ್ಟೆಯನ್ನು ಸಹೋದ್ಯೋಗಿಗಳು ಸ್ಮರಿಸಿ, ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪಿಯು ಡಿಡಿ ರಾಮಚಂದ್ರಪ್ಪ ಮಾತನಾಡಿ, ಲಕ್ಷೀನಾರಾಯಣ ಅವರು ೨೦೧೩ ರಲ್ಲಿ ಜೆಒಸಿ ಕೋರ್ಸುಗಳಿಂದ ವಿಲೀನಗೊಂಡು ಪ್ರಥಮ ದರ್ಜೆ ಗುಮಾಸ್ತರಾಗಿ ಮಾಸ್ತಿ ಪಿಯು ಕಾಲೇಜಿಗೆ ಬಂದರು ಅವರ ನಡೆ, ನುಡಿ, ಸರಳ,ಸಭ್ಯ ನಡವಳಿಕೆಯಿಂದ ಅತಿ ಬೇಗ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರ ಮನಗೆದ್ದರು ಎಂದು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಜೆಒಸಿಯಲ್ಲಿ ಉಪನ್ಯಾಸಕರಾಗಿದ್ದಾಗ ನಾನು ಲಕ್ಷ್ಮೀನಾರಾಯಣ ಅವರೊಂದಿಗೆ ಸುಮಾರು ೧೦ ವರ್ಷ ಕೆಲಸ ಮಾಡಿದ್ದೇನೆ, ಅವರು ಸ್ನೇಹಜೀವಿ, ಕೆಟ್ಟದ್ದನ್ನು ಆಲೋಚನೆಯೂ ಮಾಡದ ವ್ಯಕ್ತಿ, ತಪ್ಪೋ-ಸರಿಯೋ ನೇರವಾಗಿ ಮಾತನಾಡುವ ಅವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಸ್ಮರಿಸಿದರು.
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ವಿ.ಲಕ್ಷ್ಮೀನಾರಾಯಣ ಮಾತನಾಡಿ, ನಾನು ಶ್ರೀನಿವಾಸಪುರ ತಾಲ್ಲೂಕಿನ ಗೌಡಹಳ್ಳಿಯವನಾದರೂ ಇಷ್ಟು ದೂರ ಬಂದು ಮಾಸ್ತಿಯಲ್ಲಿ ಕೆಲಸಕ್ಕೆ ಹಾಜರಾದಾಗ ಭಯವಿತ್ತು ಆದರೆ ಪ್ರಾಂಶುಪಾಲರಾಗಿದ್ದ ರಾಮಚಂದ್ರಪ್ಪ ಅವರು ನನಗೆ ಕೆಲಸ ಕಲಿಸಿಕೊಟ್ಟಿದ್ದು ಮಾತ್ರವಲ್ಲ, ಎಂದೂ ಕೋಪದಿಂದ ಮಾತನಾಡಿಸಲಿಲ್ಲ ಅವರ ಆಶೀರ್ವಾದದಿಂದ ನಾನು ನೆಮ್ಮದಿಯಿಂದ ೧೨ ವರ್ಷ ಇಲ್ಲಿ ಪೂರೈಸಿದೆ, ಕಾಲೇಜಿನ ಇಂದಿನ ಅಭಿವೃದ್ದಿಗೆ ಅವರೇ ಕಾರಣ ಎಂದು ಧನ್ಯವಾದ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಸ್ನೇಹಿತರು ಲಕ್ಷ್ಮೀನಾರಾಯಣ,ಅಂಜನದೇವಿ ದಂಪತಿಗಳಿಗೆ ಒಟ್ಟಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಪಿಯು ನಿವೃತ್ತ ಉಪನಿರ್ದೇಶಕ ರಾಮಕೃಷ್ಣಪ್ಪ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಾರಾಯಣ, ಎಸ್‌ಡಿಎಂಸಿ ಅಧ್ಯಕ್ಷ ಅಕ್ರಂಪಾಷಾ, ಉಪಾಧ್ಯಕ್ಷರಾದ ನಾರಾಯಣರಾವ್, ರಾಮಯ್ಯ, ಉಪನ್ಯಾಸಕರಾದ ಜಗನ್ನಾಥ, ನಟರಾಜು, ರಾಮಣ್ಣ, ಪ್ರಶಾಂತ್, ಚಂದ್ರಶೇಖರ್, ಡಾ.ಮಂಜುನಾಥ,ಡಾ.ತಿಪ್ಪಣ್ಣ, ಶೇಖರ್, ನರಸಿಂಹಲು, ಭವ್ಯ, ಶಶಿಕಲಾ, ಸುಕನ್ಯಾ,ನೇತ್ರಾ, ಪಿಯುಶಿಕ್ಷಣ ಇಲಾಖೆ ಸಿಬ್ಬಂದಿ ಹೇಮಂತ್,ಶ್ರೀನಾಥ್, ಗಣೇಶ್, ಭಾನುಚಂದ್ರ,ಚಂದ್ರಪ್, ರಂಗಾರೆಡ್ಡಿ,ಕೋಲಾರದ ರಾಮಚಂದ್ರಪ್ಪ,ಟೇಕಲ್ ಶಾಲೆಯ ಶಿಕ್ಷಕ ಆರ್.ವೆಂಕಟಪತಿ, ಲಕ್ಷ್ಮೀನಾರಾಯಣ ಇದ್ದರು.

ಪೇಜ್ ಲೈಕ್ ಮಾಡಿ ಮತ್ತು ಸಬ್ಸ್ಕೈಬ್ ಮಾಡಿ

Leave a Reply

Your email address will not be published. Required fields are marked *