” ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ – ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಿ.ನಾಗರಾಜ್”

ಪೀಣ್ಯ ದಾಸರಹಳ್ಳಿ: ಬೆಂಗಳೂರು ನಗರದ ಕ್ವೀನ್ಸ್ ರಸ್ತೆಯಲ್ಲಿ ರುವ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜೂನ್ ತಿಂಗಳಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಮಹಿಳೆಯರ ಪೂರ್ವ ಭಾವಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ದೊಡ್ಡ ಬಿದರಿಕಲ್ಲು ವಾರ್ಡಿನ ಪ್ರಭಾವಿ ಯುವ ನಾಯಕ ವಿ.ನಾಗರಾಜ್ ಭಾಗವಹಿಸಿದ್ದರು.

ವಿ.ನಾಗರಾಜ್ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜೊತೆಗೆ ಮುಂಬರುವ ಪರಿಷತ್ ಚುನಾವಣೆ ಹಾಗೂ ಸ್ಥಳಿಯ ಚುನಾವಣೆ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದರು ಇದೆ ವೇಳೆ ಕೆಪಿಸಿಸಿ ಮಹಿಳಾ ಸದಸ್ಯ ಜಯಂತಿ ಭಗವಾನ್ ಮಾತುಕತೆ ನಡೆಸಿ ನಂತರ ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಭೇಟಿ ಮಾಡಲಾಯಿತು ಎಂದು ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ನಾಗರಾಜ್ ಅವರು ಭಾರತ ವೈಭವ ಪತ್ರಿಕೆಯ ಪ್ರತಿನಿಧಿ ಅಯ್ಯಣ್ಣ ಮಾಸ್ಟರ್ ಬೆಂಗಳೂರು ಅವರ ಜೊತೆಗೆ ಮಾತನಾಡಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

(ವರದಿಗಾರರು ಅಯ್ಯಣ್ಣ ಮಾಸ್ಟರ್ ವಿಜಯ ವಿಶ್ವವಾಣಿ ಪೀಣ್ಯ ದಾಸರಹಳ್ಳಿ)

Leave a Reply

Your email address will not be published. Required fields are marked *