ಮುಂಬೈ ವಿಮಾನ ನಿಲ್ದಾಣದಲ್ಲಿ 13 ಕೋಟಿ ಮೌಲ್ಯದ ಚಿನ್ನ ವಶ

ಮುಂಬೈ– ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಯಾಣಿಕರು ಅಕ್ರಮವಾಗಿ ತಂದಿದ್ದ 13.56 ಕೋಟಿ ರೂಪಾಯಿ ಮೌಲ್ಯದ 22.14 ಕೆಜಿ ಚಿನ್ನವನ್ನು ಕಸ್ಟಮ್ಸ್‌‍ ಇಲಾಖೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 20 ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ 11 ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಯಾಣಿಕರು ಗುದನಾಳ, ಒಳ ಉಡುಪು, ದೇಹದ ಮೇಲೆ ಮತ್ತು ರಟ್ಟಿನ ಹಾಳೆಯಲ್ಲಿ ಬಚ್ಚಿಟ್ಟಿದ್ದ ಅಮೂಲ್ಯ ಲೋಹ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ಪ್ರಕರಣದಲ್ಲಿ, ಪ್ರಯಾಣಿಕರೊಬ್ಬರು ಧರಿಸಿದ್ದ ಬುರ್ಖಾದ ಅಡಿಯಲ್ಲಿ ಚಿನ್ನಾಭರಣಗಳನ್ನು ಬಚ್ಚಿಡಲಾಗಿತ್ತು ಮತ್ತು ಇನ್ನೊಂದು ಪ್ರಕರಣದಲ್ಲಿ, ಬೆಲೆಬಾಳುವ ಲೋಹದ ಬಾರ್‌ಗಳನ್ನು ಒಳ ಉಡುಪುಗಳಲ್ಲಿ ಮರೆಮಾಡಲಾಗಿತ್ತು ಎನ್ನಲಾಗಿದೆ.

ಪ್ರಯಾಣಿಕರು ಬೆಲ್ಟ್‌‍ ಆಗಿ ಧರಿಸಿರುವ ಬಳೆ ಮತ್ತು ಬಕಲ್‌ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು, ಆದರ ಜತೆಗೆ ಮೇಣದ ರೂಪದಲ್ಲಿ ಚಿನ್ನದ ಧೂಳನ್ನು ಪ್ರಯಾಣಿಕರು ಗುದನಾಳದಲ್ಲಿ ಮರೆಮಾಡಿಕೊಂಡಿದ್ದರು ಎಂದು ಅವರು ಹೇಳಿದರು

Leave a Reply

Your email address will not be published. Required fields are marked *