ಬೀದರ್ ಪೋಲಿಸರ ಭರ್ಜರಿ ಕಾರ್ಯಾಚರಣೆ: 15 ಕೋಟಿ ಗಾಂಜಾ ಜಪ್ತಿ

ಬೀದರ್: ಎನ್ ಸಿಬಿ ಹಾಗೂ ಬೀದರ್ ಜಿಲ್ಲಾ ಪೆÇಲೀಸರಿಂದ ಭರ್ಜರಿಯಾಗಿ ಜಂಟಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 15 ಕೋಟಿ ಮೌಲ್ಯದ 1,500 ಕೆಜಿಗೂ ಅಧಿಕ ಗಾಂಜಾ ಜಪ್ತಿ ಮಾಡಲಾಗಿದೆ. ಒರಿಸ್ಸಾ ರಾಜ್ಯದ ಮಲ್ಕಾನ್‍ಗಿರಿ ಅರಣ್ಯ ಪ್ರದೇಶದಿಂದ ಅಕ್ರಮ ಗಾಂಜಾ ಸಾಗಾಟ ಮಾಡಲಾಗ್ತಿತ್ತು. ಖಚಿತ ಮಾಹಿತಿ ಆಧರಿಸಿ ಬಂಧನ ಮಾಡಲಾಗಿದೆ. ಬೀದರ್ ಜಿಲ್ಲೆ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಹಿಂಬಾಲಿಸಿಕೊಂಡು ಬಂದ ಬೆಂಗಳೂರು ಎನ್?ಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪಳ್ಳಿಯ ಬಳಿ ಗಾಂಜಾ ಜಪ್ತಿ ಮಾಡಲಾಗಿದೆ.

ಬೆಂಗಳೂರು ಎಸ್?ಸಿಬಿ ಹಾಗೂ ಜಿಲ್ಲಾ ಪೆÇಲೀಸರು ಜಂಟಿ ಕಾರ್ಯಾಚರಣೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಔರಾದ್ ಪೆÇಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗ್ತಿದೆ. ಲಾರಿಯಲ್ಲಿ ಸುತ್ತಲೂ ಸಿಮೆಂಟ್ ಇಟ್ಟಿಗೆ ಇಟ್ಟುಕೊಂಡು ಒಳಗೆ ಗಾಂಜಾ ಪ್ಯಾಕೆಟ್?ಗಳನ್ನು ಅಡಗಿಸಿಟ್ಟು ರವಾನೆ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣದ ಕುರಿತು ಎಸ್‍ಸಿಬಿ ತಂಡದಿಂದ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾಹಿತಿ ನೀಡಿದ್ದಾರೆ

Leave a Reply

Your email address will not be published. Required fields are marked *