ರಾಷ್ಟ್ರೀಯ ಹೆದ್ದಾರಿ 75 ರ ಅಡ್ವ ಹೊಳೆ ಯಿಂದ B C ರೋಡ್ ತನಕ ಸುಮಾರು 64 ಕಿಮೀ ರಸ್ತೆಯನ್ನು 2000 ಕೋಟಿ ರೂಪಾಯಿಗಳ ಕಾಮಗಾರಿಯನ್ನು ನಡೆಸುತ್ತಿದ್ದಾರೆ . ಇಲ್ಲಿ ಮಳೆಗಾಲ ಬಂದರೆ ಈ ದಾರಿಯಲ್ಲಿ ಓಡಾಡುವರು ತುಂಬಾ ಜಾಗ್ರತೆಯಿಂದ ಓಡಾಡ ಬೇಕಾಗುತ್ತದೆ . ಇಲ್ಲಿನ ಕಳಪೆ ಅವೈಜ್ನಾನಿಕ ಕಾಮಗಾರಿ ಯಿಂದ ಗೋಡೆಗಳು ಕುಸಿತಾ ಕುಸಿತ್ತಾ ಯಾರ ಮನೆ ಯಾವಾಗ ಕುಸಿಯುತೋ ಹೇಳಲಾಗದು ಇಲ್ಲಿಯ ಜನಪ್ರತಿನಿಧಿಗಳಿಗೆ ಸುಮಾರು ಮೂರು ತಿಂಗಳಿಂದ ಅವರ ಗಮನಕ್ಕೂ ತಂದರೂ ಯಾವುದೇ ಫಲನೀಡುತ್ತಿಲ್ಲ ಹಾಗೂ NHAI ಅಧಿಕಾರಿಗಾಳಿಗೆ ಗುತ್ತಿಗೆದ್ದಾರನಿಂದ ಬರುವ ರೋಕ್ಕ ಬಂದರೇ ಕಾಗೆಯನ್ನು ಸಹ ಕೋಗಿಲೆ ಎಂದು ಹೇಳುತ್ತಾರೆ ಈ ಹೆದ್ದಾರಿಯಲ್ಲಿ ಆಗುತ್ತಿರುವ ಭೂಕುಸಿತದಿಂದ ಮತ್ತು ಗುಂಡಿಗಳಿಂದ ಈ ಹೆದ್ದಾರಿಯಲ್ಲಿ ನಿತ್ಯ ಓಡಾಡುವ ವಾಹನ ಚಾಲಕರಂತು ಹಿಡಿ ಶಾಪ ಹಾಕುತ್ತಾ ಇರುತ್ತಾರೆ. ಒಂದಲ್ಲ ಒಂದರಲ್ಲಿ NH 75 ಸುದ್ದಿ ಯಾಗಿದೇ…
BESCOM ಹಾಗೂ NHAI ಅವರ ಬೇಜವಾಬ್ದಾರಿ ಕೆಲಸದಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಸಂಪರ್ಕದ ಕಂಬಗಳು , ತಡೆ ಗೋಡೆಗಳು ಕುಸಿದು ಬೀಳುತ್ತಾ ಈ ದಾರಿಯಲ್ಲಿ ಓಡಾಡುರಿಗೆ ತೂಗು ಬಿದ್ದ ಕತ್ತಿ ಆಗಿರುತ್ತದೆ. ಈ ವಿದ್ಯುತ್ ಕಂಬದಿಂದ ಸಾರ್ವಜನಿಕರಿಗೆ ಅವಘಡ ಸಂಭವಿಸಿದರೆ MESCOM ಹಾಗೂ NHAI ಅವರೇ ನೇರ ಹೊಣೆಗಾರು ಆಗಿರುತ್ತದೆ.
ವಿಜಯ್ ಕುಮಾರ್ ಟಿ ವಿ NF ಸುದ್ದಿವಾಹಿನಿ ವ್ಯವಸ್ತಾಪಕರು
