ಪಾದಚಾರಿ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ರಾಜ್ಯಸಭಾ ಸಂಸದ ಬಿಡಾ ಮಸ್ತಾನ್ ರಾವ್ ಅವರ ಪುತ್ರಿ ಬಿಎಂಡಬ್ಲ್ಯು ಕಾರ್ ಚಲಾಯಿಸಿರುವ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ. ಮಲಗಿದ್ದ ವ್ಯಕ್ತಿಯ ಮೇಲೆ ಕಾರ್ ಚಲಾಯಿಸಿದ್ದ ಪರಿಣಾಮ ಆತ ಮೃತ ಪಟ್ಟಿದ್ದಾನೆ.

ಘಟನೆ ಬಳಿಕ ಸ್ಥಳದಿಂದ ಆಕೆ ಪರಾರಿಯಾದರೂ ಸಹ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು ನೀಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಪುಣೆಯ ಪೋಶೆ ಕಾರು ಅಪಘಾತದ ಒಂದು ತಿಂಗಳ ನಂತರ ನಡೆದ ಹೈಪ್ರೊಫೈಲ್ ಕೇಸ್ ಇದಾಗಿದೆ.

ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸಂಸದ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ ತಮ್ಮ ಸ್ನೇಹಿತರೊಟ್ಟಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದಾಗ ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಚಲಾಯಿಸಿದ್ದಾರೆ, ಈ ವೇಳೆ ಕುಡಿದ ಮತ್ತಿನಲ್ಲಿದ್ದರು ಎಂದು ಮೂಲಗಳಲ್ಲಿ ವರದಿಯಾಗಿದೆ.

ಮಾಧುರಿ ಬಿಎಂಡಬ್ಲ್ಯು ಕಾರು ಓಡಿಸುತ್ತಿದ್ದಾಗ ಆಕೆಯ ಸ್ನೇಹಿತೆಯೂ ಜೊತೆಗಿದ್ದಳು ಎಂದು ತಿಳಿದು ಬಂದಿದೆ. ಚೆನ್ನೈನ ಬೆಸೆಂಟ್ ನಗರದಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದ ಪೇಂಟರ್ ಸೂರ್ಯ (24) ಎಂಬಾತನ ಮೇಲೆ ರಾಜ್ಯಸಭಾ ಸಂಸದನರ ಪುತ್ರಿ ಕಾರು ಚಲಾಯಿಸಿದ್ದು, ಅದಾಗಲೇ ಅಸುನೀಗಿದ್ದ ಸಂತ್ರಸ್ತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ರು ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾರೆ. ಮೃತ ಸೂರ್ಯ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ.

ಘಟನೆ ನಂತರ ಸ್ಥಳೀಯರು ಜೆ-5 ಶಾಸ್ತ್ರಿನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಶರು ಸಿಸಿಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅಪಘಾತ ಮಾಡಿದ ಬಿಎಂಡಬ್ಲ್ಯೂ ಕಾರು ರಾಜ್ಯಸಭಾ ಸಂಸದ ಬೀಡಾ ಮಸ್ತಾನ್ ರಾವ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಈ ಕಾರು ಪುದುಚೇರಿಯಲ್ಲಿ ನೋಂದಣಿಯಾಗಿದೆ ಎಂಬುದು ಗೊತ್ತಾಗಿದೆ. ಬಳಿಕ ಸಂಸದರ ಪುತ್ರಿಗೆ ಜಾಮಿನು ನೀಡಲಾಗಿದೆ.