ನಟಿ ಪವಿತ್ರ ಗೌಡ ಆರೋಗ್ಯದಲ್ಲಿ ಏರುಪೇರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ಪವಿತ್ರ ಗೌಡ ಸೇರಿದಂತೆ ಒಟ್ಟು 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇಹದಲ್ಲಿ ಗ್ರೂಕೋಸ್ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದರು.

ಪವಿತ್ರ ಗೌಡ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಪೊಲೀಸ್​ ಠಾಣೆಗೆ ವೈದ್ಯರನ್ನು ಕರೆಸಲಾಯಿತು. ನಂತರ ಪವಿತ್ರ ಗೌಡ ಅವರನ್ನು ಪೊಲೀಸ್​ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಈ ವೇಳೆ ವೈದ್ಯರು ಆಕೆಯ ಆರೋಗ್ಯ ತಪಾಸಣೆ ನಡೆಸಿ ಐವಿ ಫ್ಲ್ಯೂಯೆಡ್ ಹಾಕಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಪೊಲೀಸರು ಆಕೆಯನ್ನು ಮತ್ತೆ ಠಾಣೆಗೆ ಮರಳಿ ಕರೆದುಕೊಂಡು ಬಂದಿದ್ದಾರೆ.

Leave a Reply

Your email address will not be published. Required fields are marked *