ತಿರುಪತಿ ತಿಮ್ಮಪ್ಪನ ದರ್ಶನವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಹಲವಾರು ಜನ ಅನೇಕ ಊರಿನಿಂದ ಬೇರೆ ಬೇರೆ ದೇಶದಿಂದ ತಿಮ್ಮಪ್ಪನನ್ನು ಕಾಣಲು ಬರುತ್ತಾರೆ. ದರ್ಶನದ ಸಮಯದಲ್ಲಿ ಒಮ್ಮೆ ಆ ಸ್ವಾಮಿಯ ಮುಖವನ್ನು ಸಂತೃಪ್ತಿಯಿಂದ ನೋಡಿದರೆ ಸಾಕು ಕೆಲ ಕ್ಷಣಗಳು ನಮ್ಮನೇ ನಾವು ಮರೆತು ಬಿಡುತ್ತೇವೆ.

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ದರ್ಶನ ಪಡೆಯುವುದು ಅನೇಕ ಜನುಮದ ಪುಣ್ಯವೆಂದು ಎಷ್ಟೊ ಜನ ತಿಳಿದಿದ್ದಾರೆ. ಶ್ರೀ ವೆಂಕಟೇಶ್ವರ ಸ್ವಾಮೀಯ ದರ್ಶನಕ್ಕೆ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ, ತಮಿಳುನಾಡಿನಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಪರಿಣಾಮ ತಿರುಮಲ ಶ್ರೀಗಳ ದರ್ಶನಕ್ಕೆ ಆಗಮಿಸಿದ ಭಕ್ತರಿಂದ ತುಂಬಿ ತುಳುಕುತ್ತಿದೆ.

ಶನಿವಾರ, ಭಾನುವಾರದ ರಜೆ ಹಾಗೂ ಸೋಮವಾರ ಬಕ್ರೀದ್ ರಜೆ ಇರುವುದರಿಂದ ತಿರುಮಲದ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತಾಧಿಗಳು ಭಗವಂತನ ದರ್ಶನಕ್ಕೆ ಬರುತ್ತಿದ್ದಾರೆ.

ಭಾರೀ ಜನದಟ್ಟಣೆ ಕಂಡುಬಂದಿದ್ದು, ಭಕ್ತಾದಿಗಳು ದೇವರ ದರ್ಶನಕ್ಕಾಗಿ ಸುಮಾರು 3 ಕಿ.ಮೀ.ವರೆಗೂ ಸರತಿ ಸಾಲಿನಲ್ಲಿ ನಿಂತಿದ್ದರು.